ಮುಜಾಫರ್‍ನಗರ, ಜ.1- ಇಲ್ಲಿನ ಮಿರಾನ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟೋರೆಂಟ್‍ವೊಂದರ ಆವರಣದಲ್ಲಿ ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದ್ದಕ್ಕಾಗಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಅಮಿತ್‍ಕುಮಾರ್ ಪರವಾನಗಿ ಪಡೆದ ಎರಡು ಶಸ್ತ್ರಗಳಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದರೆ ಅವನ ಮೂವರು ಮಿತ್ರರು ನರ್ತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದ್ದು, ಅವನ ಗೆಳೆಯರನ್ನು ಶಾಂತಿಭಂಗ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
ಅಮಿತ್‍ನಿಂದ ರೈಫಲ್ ಮತ್ತು ರಿವಾಲ್ವರ್‍ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿರಾನ್‍ಪುರ ಠಾಣಾಧಿಕಾರಿ ಜ್ಞಾನೇಶ್ವರ್ ಲೋಧ್ ಹೇಳಿದ್ದಾರೆ.
ದೆಹಲಿ-ಪೌರಿ ಹೆದ್ದಾರಿ ಸಮೀಪದ ರೆಸ್ಟೋರೆಂಟ್‍ನಲ್ಲಿ ಘಟನೆ ಸಂಭವಿಸಿದೆ. ಆರೋಪಿಗಳು ಹೊಸ ವರ್ಷಾಚರಣೆ ಮಾಡುತ್ತಿದ್ದರೇ ಎಂಬುದನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ.
