ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ LET ಅಂಗ ಸಂಸ್ಥೆ PAFF ನಿಷೇಧ

Social Share

ನವದೆಹಲಿ,ಜ.7- ದೇಶದ ಭದ್ರತೆ ಸವಾಲುಡ್ಡುವ ಘಟನೆಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಲಷ್ಕರ್-ಇ- ತೋಯ್ಬಾದ ಅಂಗ ಸಂಸ್ಥೆಯೆಂದೆ ಗುರುತಿಸಲಾದ ಜಮ್ಮು-ಕಾಶ್ಮೀರದ ಪಿಪಲ್ಸ್ ಆಂಟಿ ಪ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ಸಂಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ.

ಲಷ್ಕರ್-ಇ-ತೋಯ್ಬಾದ ಸದಸ್ಯ ಅರ್ಬಜ್ ಅಹಮದ್ ಮಿರ್‍ನನ್ನು ಪ್ರತ್ಯೇಕ ಭಯೋತ್ಪಾದಕ ಎಂದು ಇದೇ ವೇಳೆ ಘೋಷಿಸಲಾಗಿದೆ. ಪಿಎಎಫ್‍ಎಫ್ ಭದ್ರತಾ ಸಿಬ್ಬಂದಿಗಳಗೆ ಬೆದರಿಕೆ ಒಡ್ಡುವುದು, ರಾಜಕೀಯ ನಾಯಕರಿಗೆ ಮತ್ತು ನಾಗರೀಕ ಕೆಲಸಗಾರರಿಗೆ ಬೆದರಿಕೆ ಹಾಕುತ್ತಿದ್ದರು.

ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ನಗರಗಳಲ್ಲಿ ಪಿಎಎಫ್‍ಎಫ್ ಸಂಘಟನೆ ಹಿಂಸಾಕೃತ್ಯ ನಡೆಸಲು ಸಂಚು ರೂಪಿಸಿತ್ತು. ಇತರ ಸಂಘಟನೆಗಳ ಜೊತೆ ಸೇರಿ ಸಂಚಿನಲ್ಲಿ ಭಾಗಿಯಾಗಿರುವುದಲ್ಲದೆ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆ ಮಾಡಿಕೊಳ್ಳುವುದು.

ಬಿಬಿಎಂಪಿ ಐಡಿಯಾ ಅಟ್ಟರ್ ಪ್ಲಾಪ್, ಬಿರುಕು ಬಿಟ್ಟ ದೇಶದ ಪ್ರಪ್ರಥಮ ರ‍್ಯಾಪಿಡ್ ರಸ್ತೆ

ಬಂದೂಕು, ಶಸ್ತ್ರಾಸ್ತ್ರ, ಸ್ಪೋಟಕಗಳ ಬಳಕೆಗೆ ತರಬೇತಿ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ (ಯುಎಪಿಎ) ಸೆಕ್ಷನ್ 35ರ ಉಪ ಪರಿಚ್ಛೇಧ 1ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಿಎಎಫ್‍ಎಫ್ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ವಿಶ್ವದ 28 ದೇಶಗಳಲ್ಲಿ ಕ್ರಾಕೆನ್ ವೈರಸ್ ಅಬ್ಬರ

ಪ್ರತ್ಯೇಕವಾದ ಅಧಿಸೂಚನೆಯಲ್ಲಿ ಅರ್ಬಾಜ್ ಅಹಮದ್ ಮೀರ್‍ನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಇತ್ತ ಜಮ್ಮು ಕಾಶ್ಮೀರದಲ್ಲಿ ಜನಿಸಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ. ಇತ್ತೀಚೆಗೆ ಕಣಿವೆ ನಾಡಿನಲ್ಲಿ ನಡೆದ ಶಿಕ್ಷಕಿ ಸೇರಿದಂತೆ ಹಲವು ನಾಗರೀಕರ ಹತ್ಯೆ ಪ್ರಕರಣಗಳಲ್ಲಿ ಮಿರ್‍ನ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಆತನ ವಿರುದ್ಧ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

Center Govt, declare, PAFF, terrorist, organization,

Articles You Might Like

Share This Article