ಬೆಂಗಳೂರು,ಫೆ.28- ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮಾ.4ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಿದೆ.
ಮಾ.4ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಫಲಾನುಭವಿಗಳ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು, ಮಾ.20ವರೆಗೆ ರಾಜ್ಯದ 31 ಜಿಲ್ಲೆಗಳಲ್ಲೂ ಈ ಸಮಾವೇಶ ನಡೆಯಲಿದೆ.
ವಿಧಾನಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಆಚಾರ್ ಹಾಲಪ್ಪ, ಎಸ್.ಟಿ.ಸೋಮಶೇಖರ್ ಮತ್ತು ಕೆ.ಗೋಪಾಲಯ್ಯ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ನೂರಾರು ಯೋಜನೆಗಳನ್ನು ಜಾರಿ ಮಾಡಿದೆ. ಇದು ಸಮರ್ಪಕವಾಗಿ ಜನರಿಗೆ ತಲುಪಿಸಬೇಕೆಂಬ ಕಾರಣ ಕ್ಕಾಗಿಯೇ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ್ ಹಾಲಪ್ಪ ಮಾತನಾಡಿ, ಎಲ್ಲ ಫಲಾನುಭವಿಗಳನ್ನು ಒಂದೆಡೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನಡೆಸುತ್ತಿರುವ ಕಾರ್ಯಕ್ರಮ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೊದಲ ಫಲಾನುಭವಿಗಳ ಸಮಾವೇಶ ಮಾ.4ರಿಂದ ಆರಂಭವಾಗಲಿದೆ. ಚಿತ್ರದುರ್ಗದಿಂದ ಆರಂಭವಾಗಿ ನಂತರ ಹಂತ ಹಂತವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುವುದು. ದೊಡ್ಡ ಮಟ್ಟದಲ್ಲಿ ಫಲಾನುಭವಿಗಳು ಸೇರಲಿದ್ದಾರೆ ಎಂದರು.
ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು
ಸಾಮಾಜಿಕ ನ್ಯಾಯಪರ ಹಾಗೂ ಅಭಿವೃದ್ಧಿ ಪರ ಸಾಗುತ್ತಿರುವ ಬೊಮ್ಮಾಯಿ ಆಡಳಿತ ಬಗ್ಗೆ ಹಂಚಿಕೊಳ್ಳತ್ತಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್ ಘೋಷಣೆ ಅಡಿ ಸರ್ಕಾರ ಮಾಡುತ್ತಿದ್ದೇವೆ ಎಂದು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಪಿಎಂ ಕಿಸಾನ್ ಸಮ್ಮಾನ್ ನಿ, ಹಕ್ಕುಪತ್ರ ನೀಡುವ ಕೆಲಸ ಮಾಡಲಾಗುತ್ತಿದೆ. ಫಲಾನುಭವಿಗಳಿಗ ನೀಡ್ತಿದ್ದು, ಮತ್ತಷ್ಟು ಫಲಾನುಭವಿಗಳನ್ನ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಾಲಪ್ಪ ಅವರು ತಮ್ಮ ಇಲಾಖೆಯ ಕಾರ್ಯಕ್ರಮಗಳ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದೆ ತಡಬಡಾಯಿಸಿದ ಪ್ರಸಂಗ ಜರುಗಿತು. ಇಲಾಖೆಯಲ್ಲಿ ಸಚಿವರಾದ ನಂತರ ಮಾಡಿದ ಸುಧಾರಣೆಗಳು, ಕಾರ್ಯಕ್ರಮಗಳ ಅನುಷ್ಠಾನ ಇತ್ಯಾದಿ ವಿಷಯಗಳ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದರು.
ಏನೇ ಪ್ರಶ್ನೆ ಮಾಡಿದರೂ ಅದಕ್ಕೆ ಸರಿಯಾದ ಉತ್ತರ ಕೊಡದ ಹಾಲಪ್ಪ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿದರು. ಉಸ್ತುವಾರಿ ಸಚಿವರುಗಳ ಬಳಿಯೇ ಎಲ್ಲ ಉತ್ತರವಿದೆ. ಅಲ್ಲಿಯೇ ಉತ್ತರ ಕೊಡುತ್ತಾರೆ ಎಂದು ನುಣುಚಿಕೊಂಡರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪ ಕಣ್ಣೀರು ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿರುವುದಕ್ಕೆ ಅವರು ಎಂದಾದರೂ ಪಕ್ಷವನ್ನು ಸಂಘಟಿಸಿದ್ದು ಇಲ್ಲವೇ ಕಟ್ಟಿದ್ದನ್ನು ನೋಡಿದ್ದೀರಿ ಎಂದು ಸೋಮಶೇಖರ್ ಮಾಧ್ಯಮದವರನ್ನು ಪ್ರಶ್ನಿಸಿದರು.
ಯಡಿಯೂರಪ್ಪ ಅವರು 60 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷ ಸಾರ್ವಜನಿಕರ ಸೇವೆ ಮಾಡಿದ್ದಾರೆ. ಅವರನ್ನು ಯಾವುದಕೋ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದರು.
ಅಷ್ಟಕ್ಕೂ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡಿಕೊಂಡರೆ ಸಾಕು ನಮ್ಮ ನಾಯಕರಾದ ಯಡಿಯೂರಪ್ಪನವರನ್ನು ನೋಡಿಕೊಳ್ಳಲು ಬಿಜೆಪಿಯಿದೆ. ಅವರಿಗೆ ಇಲ್ಲದ ಚಿಂತೆ ಇವರಿಗ್ಯಾಕೆ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆ ಕೈಬಿಡಲು ಸರ್ಕಾರಿ ನೌಕರರಿಗೆ ಸಿಎಂ ಮನವಿ
ವಲಸಿಗ ಸಚಿವರ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆಗೆ ನಮ್ಮನ್ನು ಯಾರು ಕೂಡ ಪಕ್ಷಕ್ಕೆ ಬಂದು ಕರೆದಿಲ್ಲ. ನಾವು ಈಗಲೂ ಬಿಜೆಪಿಯಲ್ಲೇ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದ ಸ್ಪರ್ಧೆ ಮಾಡುತ್ತೇವೆ. ನನ್ನನ್ನು ಸೇರಿದಂತೆ ಯಾರೂ ಕೂಡ ಎಲ್ಲಿಯೂ ಹೋಗುವುದಿಲ್ಲ. ಕೆಲವು ಊಹಾಪೋಹಗಳು ಹಬ್ಬುತ್ತಲೇ ಇರುತ್ತವೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿ, ಕಿಸಾನ್ ಸಮ್ಮಾನ್ ಯೋಜನೆಯಡಿ 52 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗಿದೆ. ವಿದ್ಯಾನಿ ಯೋಜನೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಹಣ ತಲುಪುತ್ತಿದೆ ಎಂದರು. ಯೋಜನೆಗಳು ಜನರಿಗೆ ತಲುಪಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.
ಸಮಾವೇಶ ಮಾಡಿ ಪ್ರತಿ ಜಿಲ್ಲೆಗೂ ಭೇಟಿ ಕೊಡುತ್ತೇವೆ. ಅಲ್ಲಿ ಎಷ್ಟು ಜನಕ್ಕೆ ಸಹಾಯವಾಗಿದೆ ಎಂಬ ಮಾಹಿತಿ ಪಡೆಯುತ್ತೇವೆ. ಇದೊಂದು ಯಶಸ್ವಿ ಸಮಾವೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
central, state, government, schemes, beneficiaries,