ಕರ್ನಾಟಕದಲ್ಲಿ ಚುನಾವಣಾ ಸಮೀಕ್ಷೆ ನಡೆಸಲು ತಂಡ ರವಾನಿಸಿದ ಬಿಜೆಪಿ ಹೈಕಮಾಂಡ್

Social Share

ಬೆಂಗಳೂರು,ಅ.11- ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಆಡಳಿತರೂಢ ಬಿಜೆಪಿ 224 ವಿಧಾನಸಭೆ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು 23 ಜನರ ತಂಡವನ್ನು ರವಾನಿಸಿದೆ. ನಮ್ಮಲ್ಲಿ ಚಂದ್ರಗುಪ್ತ, ಚಾಣುಕ್ಯರು ಇದ್ದಾರೆ. ನಮಗೆ ಯಾವುದೇ ಭಯವಿಲ್ಲ ಎಂದು ಸಿಟಿ ರವಿ ಹೇಳಿದ್ದರು.

ಆದರೆ ಈ ಚಾಣುಕ್ಯರು ಯಾರು ಎಂದು ಹೇಳಿರಲಿಲ್ಲ. ಆದರೆ ಈಗ 23 ಮಂದಿಯ ತಂಡ ರಹಸ್ಯವಾಗಿ ಸಮೀಕ್ಷೆ ಆರಂಭಿಸಿದೆ ಎನ್ನಲಾಗುತ್ತಿದೆ. ಒಬ್ಬರಿಗೆ 10 ಕ್ಷೇತ್ರಗಳಂತೆ ಒಟ್ಟು 23 ಜನರಿಗೆ 224 ಕ್ಷೇತ್ರಗಳನ್ನು ಹಂಚಿಕೆ ಮಾಡಿ ಹೈಕಮಾಂಡ್ ಟಾಸ್ಕ್ ನೀಡಿದೆ. ಈ ತಂಡವು 224 ಕ್ಷೇತ್ರಗಳ ಇಂಚಿಂಚು ಮಾಹಿತಿಯನ್ನು ಸಂಗ್ರಹ ಮಾಡಲಿದೆ ಎಂದು ಹೇಳಲಾಗಿದೆ.

ಮಾಹಿತಿ ಕಲೆ ಹಾಕುವುದಷ್ಟೇ ಅಲ್ಲ ಕೆಲ ರಹಸ್ಯ ಚಟುವಟಿಕೆಗಳ ಮೇಲೆಯೂ ತಂಡ ನಿಗಾ ಇಡಲಿದೆ. ಎಲ್ಲ ಪಕ್ಷಗಳ ನಾಯಕರ ಚುನಾವಣಾ ಚಟುವಟಿಕೆಗಳ ಬಗ್ಗೆ ಆ ಟೀಮ್ ಹದ್ದಿನ ಕಣ್ಣು ಇಡಲಿದೆ.

23 ಜನರ ತಂಡದಲ್ಲಿ ಯಾರಿದ್ದಾರೆ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿಲ್ಲ. ಈ ತಂಡ ನೀಡುವ ವರದಿ ಆಧಾರದ ಮೇಲೆ ಹೈಕಮಾಂಡ್‍ನಿಂದ ತಂತ್ರಗಾರಿಕೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿದುಬಂದಿದೆ.

Articles You Might Like

Share This Article