ನವದೆಹಲಿ,ಜೂನ್.7-ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳಕ್ಕೆ ಕೇಂದ್ರಸಂಪುಟ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಈ ನಿರ್ಧಾರವನ್ನು ಮಾಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಲು ಮತ್ತು ಬೆಳೆ ವೈವಿಧ್ಯತೆಯನ್ನು ಉತ್ತೇಜಿಸಲು ಬೆಂಬಲ ಬೆಲೆಯನ್ನು ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ಮೂಲಕ ಬೆಲೆಯನ್ನು ನಿರ್ಧಾರಿಸುತ್ತದೆ ಎಂದು ತಿಳಿಸಿದರು. ಮಾರುಕಟ್ಟೆಯ ಅನಿರೀಕ್ಷಿತ ಏರಿಳಿತಗಳ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಹೆಚ್ಚಳಕ್ಕೆ ಅನುಮೋದನೆಯ ನಿರ್ಣಾಯಕ ಕ್ರಮವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ರೈತರನ್ನು ಉತ್ತೇಜಿಸುವ ಸಲುವಾಗಿ 2023-24 ಬೆಳೆ ವರ್ಷಕ್ಕೆ (ಜುಲೈ-ಜೂನ್) ಭತ್ತದ ಎಂಎಸ್‍ಪಿಯಲ್ಲಿ ಪ್ರತಿ ಕ್ವಿಂಟಲ್‍ಗೆ 143 ರೂ. ರಿಂದ 2,183 ರೂ,ಗೆ ಹೆಚ್ಚಿಸಲು ಅನುಮೋದಿಸಿದೆ . ಹೆಚ್ಚಿನ ಪ್ರದೇಶವನ್ನು ಬೆಳೆಯ ಅಡಿಯಲ್ಲಿ ತರಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಉಚಿತ ವಿದ್ಯುತ್ ಪಡೆಯಲು ಬಾಡಿಗೆ ಕರಾರು ಪತ್ರ ಕಡ್ಡಾಯ
ಚಿಲ್ಲರೆ ಹಣದುಬ್ಬರ ಕುಸಿತದ ಪ್ರವೃತ್ತಿಯಲ್ಲಿರುವ ಸಮಯದಲ್ಲಿ ಎಂಎಸ್‍ಪಿ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ ಎಂದು ಅವರು ಹೇಳಿದರು. ಸಾಮಾನ್ಯ ದರ್ಜೆಯ ಭತ್ತದ ಎಂಎಸ್‍ಪಿಯನ್ನು 2023-24ರ ಬೆಳೆ ವರ್ಷಕ್ಕೆ 2,183 ರೂ, ಗೆ ಹೆಚ್ಚಿಸಲಾಗಿದೆ ಎಂದು ಗೋಯಲ್ ಹೇಳಿದರು.
#Centre, #Approves, #MSP, #Crops, #CurrentYear,