ಮಹಾರಾಷ್ಟ್ರ,ಫೆ.25 – ಔರಂಗಬಾದ್ ನಗರವನ್ನು ಛತ್ರಪತಿ ಶಿವಾಜಿ ನಗರವೆಂದು ಮತ್ತು ಉಸ್ಮಾನಬಾದ್ ನಗರವನ್ನು ಧಾರಶಿವ್ ಎಂದು ಮರುನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ಔರಂಗಬಾದ್ ಎಂಬ ಹೆಸರು ಮೊಘಲ್ ರಾಜ ಔರಂಗಜೇಬನಿಂದ ಬಂದಿದ್ದು, ಉಸ್ಮಾನ ಬಾದ್ ಹೆಸರು ಕೂಡಾ ಮೊಘಲ್ ರಾಜನೊಬ್ಬನಿಂದ ಬಂದಿದೆ. ಈ ಹೆಸರುಗಳನ್ನು ಛತ್ರಪತಿ ಶಿವಾಜಿ ಮತ್ತು ಧಾರಶಿವ ಎಂದು ಬದಲಾಯಿಸಬೇಕೆಂದು ಬಲ ಪಂಥೀಯ ಸಂಘಟನೆಗಳು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು.
ನಿಂತಿದ್ದ ಬಸ್‍ಗಳಿಗೆ ಟ್ರಕ್ ಡಿಕ್ಕಿಯಾಗಿ 14 ಮಂದಿ ಸಾವು
ಈ ಬಗ್ಗೆ ಎನ್‍ಸಿಪಿ ಸರ್ಕಾರವೇ ಸದನದಲ್ಲಿ ನಿರ್ಧಾರ ಕೈಗೊಂಡಿತ್ತು. ಅವರ ಸರ್ಕಾರ ಉರುಳಿ ಏಕನಾಥ್ ಶಿಂದೆ ಸರ್ಕಾರ ಬಂದಾಗ ಹಿಂದಿನ ಸರ್ಕಾರದ ನಿರ್ಧಾರವನ್ನು ಖುಲಾಸೆಗೊಳಿಸಿ, ಹೊಸ ನಿರ್ಧಾರವನ್ನು ಮಾಡಿ, ಅನುಮತಿಗಾಗಿ ಕೇಂದ್ರಕ್ಕೆ ಮನವಿ ಮಾಡಿತ್ತು.
ಇದೀಗ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಈ ಬಗ್ಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿದೆ.
Centre, approves, renaming, Maharashtra, Aurangabad, Osmanabad,