ಆಕ್ಸಿಜನ್ ದಾಸ್ತಾನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ

Social Share

ನವದೆಹಲಿ,ಡಿ.24- ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಭಾರಿ ಅನಾವುತ ಮಾಡುತ್ತಿರುವ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ದ್ರವರೂಪದ ವೈದ್ಯಕೀಯ ಆಮ್ಲಜನಕ ಲಭ್ಯತೆ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗ್ನಿನಿ ಅವರು, ಪಿಎಸ್‍ಎ ಪ್ಲಾಂಟ್‍ಗಳು ಪೂರ್ಣ ಪ್ರಮಾಣ ಹಾಗೂ ನಿಯಮಿತವಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾಕ್ ಡ್ರಿಲ್ ಮಾಡುವಂತೆ ಸೂಚಿಸಿದ್ದಾರೆ.

ಆರೋಗ್ಯ ಸೌಲಭ್ಯಗಳು ಮತ್ತು ತಡೆ ರಹಿತ ಮರು ಪೂರಣ ವ್ಯವಸ್ಥೆ ಹಾಗೂ ಸರಬರಾಜನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್‍ಗಳ ಲಭ್ಯತೆ, ಬ್ಯಾಕ್‍ಅಪ್ ದಾಸ್ತಾನು ಮತ್ತು ಪೂರ್ಣಪ್ರಮಾಣದ ಮರುಪೂರಣ ವ್ಯವಸ್ಥೆಯನ್ನು ನಿರ್ವಹಣೆ ಮಾಡಿರಬೇಕು ಎಂದು ಸೂಚಿಸಲಾಗಿದೆ.

ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ದಾಳಿ, ಯುವಕನ ಹತ್ಯೆ

ಜೀವ ರಕ್ಷಕ ಸೌಲಭ್ಯಗಳಾದ ವೆಂಟಿಲೇಟರ್ಸ್, ಬಿಪಿಎಪಿ ಮತ್ತು ಎಸ್‍ಪಿಒ2 ವ್ಯವಸ್ಥೆಗಳನ್ನು ಲಭ್ಯವಿರಿಸಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿನ ಸವಾಲುಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಆಮ್ಲಜನಕ ನಿಯಂತ್ರಣ ಕೊಠಡಿಗಳನ್ನು ಮತ್ತೆ ಆರಂಭಿಸಬೇಕು. ಆಮ್ಲಜನಕದ ದೈನಂದಿನ ಬೇಡಿಕೆ, ಜೊತೆಗೆ ಆರೋಗ್ಯಸ ಸೌಲಭ್ಯಗಳ ಬಗ್ಗೆ ನಿಗಾವಹಿಸುವಂತೆ ತಾಕೀತು ಮಾಡಲಾಗಿದೆ.

ಕೋವಿಡ್ ಗಾಬರಿಬೇಡ, ಎಚ್ಚರಿಕೆ ಇರಲಿ : ಸಿಎಂ ಬೊಮ್ಮಾಯಿ

ಈ ಮೊದಲು ಕೋವಿಡ್ ಅಲೆಗಳ ಸಂದರ್ಭದಲ್ಲಿನ ಅನುಭವವನ್ನು ಆಧರಿಸಿ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಘಟಕಗಳು, ತೀವ್ರ ನಿಗಾ ಘಟಕಗಳನ್ನು ನಿರ್ಮಿಸಲಾಗಿತ್ತು. ಉತ್ಪಾದನೆ , ಸರಬರಾಜು ಹಾಗೂ ಲಭ್ಯತೆಗಳನ್ನು ಕೇಂದ್ರ ಸರ್ಕಾರ ಪದೇ ಪದೇ ಸಭೆಗಳ ಮೂಲಕ ಪರಿಶೀಲನೆ ಮಾಡುತ್ತಿದೆ. ಪ್ರಸ್ತುತ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಾಕ್ ಡ್ರಿಲ್ ಮೂಲಕ ಮತ್ತೆ ಆಮ್ಲಜನಕ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.

Covid19, Centregovernment, states, stock, oxygen cylinders,

Articles You Might Like

Share This Article