ನವದೆಹಲಿ,ಫೆ.18- ಅಣೆಕಟ್ಟುಗಳ ಸುರಕ್ಷತೆಗಾಗಿ ಗುಣಮಟ್ಟಗಳ ರಕ್ಷಣೆ, ಅಣೆಕಟ್ಟು ಸಂಬಂಧಿತ ದುರಂತಗಳ ತಡೆಗಟ್ಟುವಿಕೆ ಮತ್ತು ಈ ನಿಟ್ಟಿನಲ್ಲಿ ಅಂತಾರಾಜ್ಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದ ಹೋಣೆಗಾರಿಕೆಯುಳ್ಳ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ.
ಕಳೆದ ವರ್ಷದ ಡಿಸೆಂಬರ್ 8ರಂದು ಸಂಸತ್ತಿನ ಅಂಗೀಕಾರ ಪಡೆದ ಅಣೆಕಟ್ಟು ಸುರಕ್ಷತಾ ಅಧಿನಿಯಮವು ರಾಜ್ಯಮಟ್ಟದ ಅಣೆಕಟ್ಟು ಸುರಕ್ಷತಾ ಸಂಸ್ಥೆಗಳು ಮತ್ತು ಅಣೆಕಟ್ಟುಗಳ ಮಾಲೀಕರುಗಳೊಂದಿಗೆ ಈ ಪ್ರಾಧಿಕಾರವು ಸುರಕ್ಷತಾ ಸಂಬಂಧಿತ ದತ್ತಾಂಶಗಳು ಮತ್ತು ಕಾರ್ಯಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಇಂದು ಜಲಶಕ್ತಿ ಸಚಿವಾಲಯವು ನಿರ್ವಹಿಸುತ್ತದೆ ಎಂದು ಇಂದು ಜಲಶಕ್ತಿ ಸಚಿವಾಲಯವು ಬಿಡುಗಡೆ ಮಾಡಿರುವ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಾಧಿಕಾರಕ್ಕೆ ಒಬ್ಬ ಅಧ್ಯಕ್ಷರ ನೇತೃತ್ವ ಇರುತ್ತದೆ. ಇವರಿಗೆ ಐವರು ಸದಸ್ಯರು ನೆರವಾಗುತ್ತಾರೆ. ಪ್ರಾಧಿಕಾರವು ನೀತಿ ಮತ್ತು ಸಂಶೋಧನೆ, ತಾಂತ್ರಿಕ, ನಿಯಂತ್ರಣ, ವಿಪತ್ತು ಮತ್ತು ಪರಿಹಾರ ಹಾಗೂ ಆಡಳಿತ ಮತ್ತು ಹಣಕಾಸು ಎಂಬ ಐದು ವಿಭಾಗಳ್ಲಲಿ ಒಳಗೊಂಡಿರುತ್ತದೆ.
ಪ್ರಾಧಿಕಾರವು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುತ್ತದೆ ಮತ್ತು ನಾಲ್ಕು ಪ್ರಾದೇಶಿಕ ಕಚೇರಿಗಳು ಇದಕ್ಕೆ ನೆರವಾಗುತ್ತದೆ. ಕೇಂದ್ರವ ಅಣೆಕಟ್ಟು ಸುರಕ್ಷತೆ ಕುರಿತು 22 ಸದಸ್ಯರ ಒಂದು ರಾಷ್ಟ್ರೀಯ ಸಮಿತಿಯಲ್ಲಿ ರಚಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರು ಈ ಸಮಿತಿಯ ನೇತೃತ್ವ ವಹಿಸುತ್ತಾರೆ.
