ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊರೋನಾ ನಿಯಮ ಸಡಿಲ

Social Share

ನವದೆಹಲಿ : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದ್ದ ಏಳು ದಿನಗಳ ಗೃಹ ಬಂಧನ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಓಮಿಕ್ರಾನ್ ರೂಪಾಂತರ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮೊದಲು ಮಾರ್ಗಸೂಚಿಗಳನ್ನು ಪರಿಷ್ಕರಿಸಿ ವಿದೇಶಗಳಿಂದ ಬರುವ ಪ್ರಯಾಣಿಕರು 14 ದಿನ ಸ್ವಯಂ ನಿಗಾವಣೆಯಲ್ಲಿರಬೇಕು, ಭಾರತಕ್ಕೆ ಆಗಮಿಸಿದ ಬಳಿಕ ಏಳು ದಿನ ಕಡ್ಡಾಯವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿರಬೇಕು ಎಂದು ನಿಯಮ ರೂಪಿಸಲಾಗಿತ್ತು.
ಈಗ ಅದಕ್ಕೆ ವಿನಾಯ್ತಿ ನೀಡಲಾಗಿದ್ದು, ಸೋಮವಾರದಿಂದ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಲಸಿಕೆ ಪಡೆದ ಪ್ರಮಾಣ ಪತ್ರ ಮತ್ತು ಪ್ರಯಾಣದ 72 ಗಂಟೆಗಳ ಅವಯಲ್ಲಿ ಮಾಡಿಸಲಾದ ಆರ್‍ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದ್ದರೆ ಕ್ವಾರಂಟೈನ್‍ನ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ, ಕೆನಡಾ, ಕ್ಯೂಬಾ, ಡೆನ್ಮಾರ್ಕ್ ಸೇರಿದಂತೆ 82 ದೇಶಗಳಿಂದ ಆಗಮಿಸುವವರಿಗೆ ವಿನಾಯ್ತಿ ನೀಡಲಾಗಿದೆ. ಅತಿಹೆಚ್ಚು ಅಪಾಯಕಾರಿ ಸೋಂಕು ಹೊಂದಿರುವ ದೇಶಗಳಿಂದ ಆಗಮಿಸುವವರು ಸ್ಥಳೀಯವಾಗಿ ಪರೀಕ್ಷೆಗೊಳಪಡಬೇಕು. ಅದರ ಪರೀಕ್ಷೆ ವರದಿ ಬರುವವರೆಗೂ ಪ್ರತ್ಯೇಕವಾಗಿ ವಾಸವಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವಿಯಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

Articles You Might Like

Share This Article