ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಭಾರತಕ್ಕೆ ಗುಡ್ ನ್ಯೂಸ್

Social Share

ನವದೆಹಲಿ,ಡಿ.16-ಪಶ್ಚಿಮ ರಾಷ್ಟ್ರಗಳಲ್ಲಿ ದೀರ್ಘ ಕಾಲದ ಆರ್ಥಿಕ ಮುಗ್ಗಟ್ಟು ಎದುರಾಗಲಿದ್ದು, ಅದರಿಂದ ಭಾರತದಲ್ಲಿ ಹೂಡಿಕೆಯ ಅವಕಾಶಗಳು ಹೆಚ್ಚಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಭವಿಷ್ಯ ನುಡಿದಿದ್ದಾರೆ.

ಯೂರೋಪ್ ಹಾಗೂ ಇತರ ರಾಷ್ಟ್ರಗಳಲ್ಲಿ ದೀರ್ಘ ಕಾಲಿನ ಆರ್ಥಿಕ ಇಂಜರಿತ ಎದುರಾಗುವ ನಿರೀಕ್ಷೆ ಇದೆ. ಆ ರೀತಿಯ ಪರಿಣಾಮಗಳು ಭಾರತದಲ್ಲಿ ಆಗುವುದಿಲ್ಲ. ಆದರೆ, ರಫ್ತು ಉದ್ಯಮ ವಿಶ್ವದಾದ್ಯಂತ ಹಿನ್ನಡೆ ಅನುಭವಿಸಲಿದೆ ಎಂದಿದ್ದಾರೆ.

ಅಮಿತ್ ಷಾ ಸೂಚನೆ ನಡುವೆಯೂ ಮಹಾಮೇಳಾವಕ್ಕೆ ಸಜ್ಜಾದ ಎಂಇಎಸ್

ಆರ್ಥಿಕ ಇಂಜರಿತ ಕೂಡ ಹಲವಾರು ಅವಕಾಶಗಳನ್ನು ಸುಷ್ಟಿಸಲಿದೆ. ಭಾರತದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ. ಅದಕ್ಕಾಗಿ ನಾವು ತಯಾರಿರಬೇಕು ಎಂದು ಹೇಳಿದ್ದಾರೆ. ಸರ್ಕಾರ ಈಗಾಗಲೇ ಹಲವಾರು ರೀತಿಯ ಕಾನೂನುಗಳನ್ನು ಬದಲಾವಣೆ ಮಾಡಿದೆ. ಉದ್ಯಮಿ ಸ್ನೇಹಿ ವಾತಾವರಣವನ್ನು ನಿರ್ಮಿಸಿದೆ. ಉದ್ಯಮಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಕಂಪೆನಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದ್ದಾರೆ.

ಯೂರೋಪ್ ದೇಶಗಳು ಆರ್ಥಿಕ ಇಂಜರಿತದಿಂದ ಸಂಕಷ್ಟಕ್ಕೆ ಎದುರಾಗಲಿವೆ. ಆ ವೇಳೆ ಅಲ್ಲಿನ ಉತ್ಪಾದ ವಲಯಗಳು ಸ್ಥಳಾಂತರಗೊಳ್ಳಲಿವೆ. ಅದಕ್ಕೆ ಭಾರತ ಸೂಕ್ತ ವೇದಿಕೆಯಾಗಲಿದೆ. ಇತ್ತೀಚೆಗೆ ಭಾರತ ಉತ್ಪಾದನೆ ಮತ್ತು ಸೇವಾ ಕ್ಷೇತ್ರದತ್ತ ಹೆಚ್ಚು ಆದ್ಯತೆ ನೀಡಿದೆ.

ನೇಕಾರ ಸಮ್ಮಾನ್ ಯೋಜನೆ ಜಾರಿ: 5000ರೂ. ನೇರ ನಗದು ವರ್ಗಾವಣೆ..

ಶುದ್ಧ ಇಂಧನಕ್ಕೆ ಜಗತ್ತು ಬದಲಾಗುತ್ತಿದೆ. ಗೃಹ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಹವಮಾನ ಬದಲಾವಣೆ ಆಧರಿಸಿ ಉದ್ಯಮ ವಲಯ ಪರಿವರ್ತನೆಯಾಗುತ್ತದೆ ಎಂದಿದ್ದಾರೆ. 2019ರ ಬಜೆಟ್ ಅಂಶಗಳನ್ನು ಗಮನದಲ್ಲಿರುಸಿಕೊಂಡು ಮುಂದಿನ 25 ವರ್ಷಗಳ ಆರ್ಥಿಕಾಭಿವೃದ್ಧಿ ನಿಟ್ಟಿನಲ್ಲಿ ಪ್ರಸಕ್ತ ಬಜೆಟ್ ಸಿದ್ಧಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

Centre working, slow inflation, FM Nirmala Sitharaman,

Articles You Might Like

Share This Article