‘ಪೂರ್ವ ತಯಾರಿ ಇಲ್ಲದೆ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿದೆ’

Social Share

ನವದೆಹಲಿ, ಜು.16- ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಸಿರುವ ಕೇಂದ್ರ ಸರ್ಕಾರ ಅಗತ್ಯವಾದ ಪೂರ್ವ ತಯಾರಿಗಳನ್ನು ಮಾಡಿಕೊಂಡಿಲ್ಲ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ಪ್ರಾಸ್ಟಿಕ್ ನಿಷೇಧವನ್ನು ಜಾರಿಗೆ ತರುವ ಮೊದಲು ಕೇಂದ್ರ ಸರ್ಕಾರ ರಾಜ್ಯ ಪರಿಸರ ಸಚಿವರ ಸಭೆ ನಡೆಸಿಲ್ಲ. ಪೂರ್ವಸಿದ್ಧತೆ ಕೊರತೆಯಿಂದ ಏಕಾಏಕಿ ಜಾರಿಗೆ ತರಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಪ್ಲಾಸ್ಟಿಕ್ ಬದಲಿಗೆ ಜನರಿಗೆ ಪರ್ಯಾಯಗಳನ್ನು ಒದಗಿಸಬೇಕಿದೆ ಮತ್ತು ಉತ್ಪಾದನಾ ಘಟಕಗಳನ್ನು ಹಸಿರು ವಲಯಗಳನ್ನಾಗಿ ಬದಲಾಯಿಸಬೇಕಿದೆ. ಅದನ್ನು ಬಿಟ್ಟು ಏಕಾಏಕಿ ನಿಷೇಧ ಮಾಡಿ ನಿರ್ಬಂಧಗಳನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.

ನಿಷೇಧವನ್ನು ಘೋಷಿಸುವ ಮೊದಲು ಸಮಸ್ಯೆಗಳನ್ನು ಪರಿಹರಿಸಬೇಕು. ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಬಳಕೆಯಾಗುವ ಕಚ್ಚಾ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದ ಜಿಎಸ್‍ಟಿ ವಿಧಿಸಲಾಗಿದೆ. ಹೀಗಾಗಿ ಅವರು ಜನರ ಕೈಗೆಟಕುವ ದರದಲ್ಲಿ ಇಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರ ಸರಿಯಾದ ಕ್ರಮಗಳನ್ನು ಅನುಸರಿಸಿಲ್ಲ, ಮೊದಲು ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಬಳಸುವ ವಸ್ತುಗಳ ಮೇಲೆ ಜಿಎಸ್‍ಟಿ ಕಡಿಮೆ ಮಾಡಬೇಕಿತ್ತು. ಸಾಕಷ್ಟು ಪೂರ್ವ ತಯಾರಿಗಳನ್ನು ಅನುಸರಿಸಬೇಕಿತ್ತು ಎಂದು ಹೇಳಿದ್ದಾರೆ.

Articles You Might Like

Share This Article