ಅರಬ್‍ನೊಂದಿಗಿನ ಬಾಂಧವ್ಯ ಮತ್ತಷ್ಟು ಸದೃಢ : ಪ್ರಧಾನಿ ಮೋದಿ

Social Share

ನವದೆಹಲಿ,ಫೆ.19- ಯುಎಇ ಜೊತೆಗಿನ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಸಿಇಪಿಎ) ಭಾರತೀಯ ಉದ್ಯಮಿಗಳಿಗೆ ಉತ್ತೇಜನ ನೀಡಿದೆ ಮತ್ತು ಕೊಲ್ಲಿ ರಾಷ್ಟ್ರದೊಂದಿಗಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ 18 ರಂದು ಪ್ರಧಾನಿ ಮೋದಿ ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜÁಯೆದ್ ಅಲ್ ನಹ್ಯಾನ್ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಸಿಇಪಿಎ ಒಪ್ಪಂದಕ್ಕೆ ಸಹಿ ಹಾಕಿದರು.

IAS vs IPS : ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ

ಸಿಇಪಿಎ ಒಪ್ಪಂದದ ಒಂದು ವರ್ಷದ ಸಾಧನೆಗಳ ಕುರಿತು ಭಾರತದ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯೂಷ್ ಗೋಯಲ್ ಮತ್ತು ಯುಎಇ ವಿದೇಶಾಂಗ ವ್ಯವಹಾರದ ರಾಜ್ಯ ಸಚಿವ ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿ ಅವರು ಬರೆದಿರುವ ಜಂಟಿ ಲೇಖನವನ್ನು ಟ್ವೀಟ್‍ನಲ್ಲಿ ಹಂಚಿಕೊಂಡಿರುವ ಮೋದಿ, ಸಿಇಪಿಎ ಒಪ್ಪಂದ ಯುಎಇನೊಂದಿಗಿನ ಸಂಬಂಧವನ್ನು ಉತ್ತೇಜಿಸಿದೆ.

ವಿಚಾರಣೆಗೆ ಕಾಲವಕಾಶ ಕೋರಿದ ಮನೀಷ್ ಸಿಸೋಡಿಯಾ

ಭಾರತೀಯ ವಾಣಿಜ್ಯೋದ್ಯಮಿಗಳಿಗೆ ಮತ್ತು ಅರಬ್‍ನೊಂದಿಗಿನ ಸಂಬಂಧವನ್ನು ಗಾಢಗೊಳಿಸಿದೆ ಎಂದಿದ್ದಾರೆ.

CEPA, UAE, boost, Indian, entrepreneurs, deepened, PM Modi,

Articles You Might Like

Share This Article