BREAKING : ಸಿಇಟಿ ಫಲಿತಾಂಶ ಪ್ರಕಟ, ಮೇಲುಗೈ ಸಾಧಿಸಿದ ಬಾಲಕರು

Social Share

ಬೆಂಗಳೂರು,ಜು.30- ಪ್ರಸ್ತಕ ಸಾಲಿನ ವೃತ್ತಿಪರ ಕೋರ್ಸ್‍ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಾಲಕಿಯರನ್ನು ಹಿಂದಿಕ್ಕಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಪೂರ್ವ ತಂಡನ್(98.611), ಕೃಷಿ ವಿಭಾಗದಲ್ಲಿ ಬೆಂಗಳೂರಿನ ಎಚ್‍ಎಎಲ್ ಪ್ಲಬಿಕ್ ಸ್ಕೂಲ್‍ನ ಅರ್ಜುನ್ ರವಿಶಂಕರ್(96.292), ಹೋಮಿಯೋಪತಿ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಕಾಲೇಜಿನ ಹೃಷಿಕೇಶ್ ನಾಗಭೂಷಣ್ ಗಂಗೂ( 99.167), ಪಶುಸಂಗೋಪನ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿ ಕಾಲೇಜಿನ ಋಷಿಕೇಶ್ ನಾಗಭೂಷಣ್ ಗಂಗೂ ಹಾಗೂ ಬಿ ಫಾರ್ಮ ವಿಭಾಗದಲ್ಲಿ ಬೆಂಗಳೂರು ವಿದ್ಯಾರಣ್ಯಪುರದ ನಾರಾಯಣ ಇ-ಟೆಕ್ನೋ ಸ್ಕೂಲ್‍ನ ಶಿಶಿರ್.ಆರ್.ಕೆ. (98.889) ಮೊದಲ ರ್ಯಾಂಕ್ ಗಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು 2022-23ನೇ ಸಾಲಿನ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು. ಕಳೆದ ಮಾರ್ಚ್ 16 ಮತ್ತು 17ರಂದು ರಾಜ್ಯದ 486 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು.

2,16,559 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 2,10,829 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಹೇಳಿದರು.
ಇಂಜಿನಿಯರ್ ವಿಭಾಗದಲ್ಲಿ ಅಪೂರ್ವ ತಂಡನ್, ಸಿದ್ದಾರ್ಥ ಸಿಂಗ್, ಆತ್ಮಕುರಿ ವೆಂಕಟನಾಥ್, ಶಿಶಿರ್.ಬಿ.ಕೆ, ವಿಶಾಲ್ ಬೈಸಾನಿ, ಸಾಗರ್.ವಿ.ಕೆ, ಮಹೇಶ್‍ಕುಮಾರ್, ಸಿದ್ದರಾರ್ಥ ಜಿ.ವಿ ಮತ್ತು ಸಾತ್ವಿಕ್.ವಿ ಅವರುಗಳು ಟಾಪ್ 9ರಲ್ಲಿ ಅಗ್ರ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ನ್ಯಾಚುರೋಪತಿ ವಿಭಾಗದಲ್ಲಿ ಹೃಷಿಕೇಶ್ ನಾಗಭೂಷಣ್ ಗಂಗೂ, ವಜ್ರೇಶ್ ವೀಣಾಧರ್ ಶೆಟ್ಟಿ, ಕೃಷ್ಣ.ಎಸ್.ಆರ್, ಋಷಾಂಕ್ ವೀಣಾಧರ್ ಶೆಟ್ಟಿ, ವಿಶಾಲ್.ಬಿ, ಆದಿತ್ಯ ಕಾಮತ್, ಮನೋಜ್.ಎನ್ ಹಾಗೂ ಅನನ್ಯ ಐಶ್ವರ್ಯ ರಟ್ಟಿಗಿ ರ್ಯಾಂಕ್ ಪಡೆದಿದ್ದಾರೆ.

ಕೃಷಿ ವಿಭಾಗದಲ್ಲಿ ಅರ್ಜುನ್ ರವಿಶಂಕರ್, ಸುಮಿತ್ ಎಸ್.ಪಾಟೀಲ್, ಸುದೀಪ್ ವೈ.ಎಂ, ಹಿತೇಶ್ ಲಕ್ಷ್ಮಿಕಾಂತ್, ಮನೋಜ್.ಎನ್, ಎ.ಕಿಶೋರ್, ಮುರ್ಕಿ ಶ್ರೀ ಭರುಣಿ, ಶಿತು ದೇಸಾಯಿ ಹಾಗೂ ವಜ್ರೇಶ್, ವೀಣಾಧರ್ ಶೆಟ್ಟಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಪಶುಸಂಗೋಪನಾ ವಿಭಾಗದಲ್ಲಿ ಹೃಷಿಕೇಶ್ ನಾಗಭೂಷಣ್ ಗಂಗೂ, ಮನೀಶ .ಎಸ್.ಎ, ಶುಭ ಕೌಶಿಕ್, ಕೃಷ್ಣ.ಎಸ್.ಆರ್, ಋಷಿಕೇಶ್ ವೀಣಾಧರ್ ಶೆಟ್ಟಿ, ಲಿಖಿತ ಪ್ರಕಾಶ್, ನಿತಿನ್.ಎಸ್ ಮತ್ತು ವಿಶಾಲ್.ಬಿ ಟಾಪರ್‍ಗಳಾಗಿ ಹೊರಹೊಮ್ಮಿದ್ದಾರೆ.

ಬಿ ಫಾರ್ಮ ವಿಭಾಗದಲ್ಲಿ ಶಿಶಿರ್.ಆರ್.ಕೆ, ಋಷಿಕೇಶ್ ನಾಗಭೂಷಣ್ ಗಂಗೂ, ಅಪೂರ್ವ ತಂಡನ್, ಆತ್ಮಕುರಿ ವೆಂಕಟ ಮಾಧವ ಶ್ರೀರಾಮ್, ಮನೀಶ.ಎಸ್.ಎ, ಸಿದ್ದಾರ್ಥ.ಸಿ, ವಜ್ರೇಶ್ ವೀಣಾಧರ ಶೆಟ್ಟಿ, ಋಷಾಂಕ್ ವೀಣಾಧರ್ ಶೆಟ್ಟಿ ಹಾಗೂ ಕೃಷ್ಣ ಎಸ್.ಆರ್ ರ್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು.

ಒಂದು ವೇಳೆ ಯಾವುದೇ ವಿದ್ಯಾರ್ಥಿಗಳ ರ್ಯಾಂಕ್ ತಡೆ ಹಿಡಿದಿದ್ದಿರೆ ಅಂತಹ ವಿದ್ಯಾರ್ಥಿಗಳು ಅರ್ಹತ ಪರೀಕ್ಷೆಯ ಅಂಕಪಟ್ಟಿಯ ಎಲ್ಲ ಪ್ರತಿಯನ್ನು ಕೆಇಎ ಕಚೇರಿಗೆ ಇಮೇಲ್ ಮೂಲಕ ಖುದ್ದಾಗಿ ಸಲ್ಲಿಸಿ ರ್ಯಾಂಕ್ ಪಡೆಯಬಹುದೆಂದು ಅಶ್ವಥ್ ನಾರಾಯಣ ತಿಳಿಸಿದರು.

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಗಾಗಿ ನೋಡಲ್ ಕೇಂದ್ರ ಅಥವಾ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ದಾಖಲಾತಿಯನ್ನು ಪರಿಶೀಲಿಸಲು ಆನ್‍ಲೈನ್ ಮುಖಾಂತರವೇ ನಡೆಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ಅಭ್ಯರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಆನ್‍ಲೈನ್ ದಾಖಲಾತಿ ಪರಿಶೀಲನೆಯಲ್ಲಿ ಎ ಮತ್ತು ಬಿ ಅಭ್ಯರ್ಥಿಗಳು ಮಾತ್ರ ಪರಿಶೀಲನೆ ಮಾಡಬಹುದು. ಪ್ರಾಕಾರದಲ್ಲಿ ವಿದ್ಯಾರ್ಥಿಗಳು ಮಾಹಿತಿ ನೀಡಲು ಅಳವಡಿಸಿರುವ ಸಹಾಯವಾಣಿಯ ತಂತ್ರಾಂಶವನ್ನು ಮಾರ್ಪಡಿಸಲಾಗಿದೆ. ಆನ್‍ಲೈನ್ ದಾಖಲಾತಿ ಪರಿಶೀಲನೆಯ ಅಭಿವೃದ್ಧಿಪಡಿಸಿದಂತೆ ಸೀಟು ಹಂಚಿಕೆಯನ್ನು ಅತಿ ಕಡಿಮೆ ಅವಯಲ್ಲಿ ಪೂರ್ಣಗೊಳಿಸಲು ತಂತ್ರಾಂಶದಲ್ಲಿ ಸೂಕ್ತ ಮಾರ್ಪಟ್ಟನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಎಂಜಿನಿಯರಿಂಗ್ ವಿಭಾಗದಿಂದ ಒಟ್ಟು 1,71,656, ಬಿಎಸ್ಸಿ ಅಗ್ರಿ ವಿಭಾಗದಿಂದ 1, 39,968, ಪಶುಸಂಗೋಪನಾ ವಿಭಾಗದಿಂದ 1,42,820, ಬಿ ಫಾರ್ಮ ವಿಭಾಗದಿಂದ 1,74,568 ಹಾಗೂ ಡಿ ಫಾರ್ಮದಿಂದ 1,74,568 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ.ವಿ ಮಹೇಶ್, ಕರ್ನಾಟಕ ಪರೀಕ್ಷಾ ಪ್ರಾಕಾರದ ನಿರ್ದೇಶಕಿ ರಮ್ಯ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article