ಸರಗಳ್ಳನ ಬಂಧನ, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಜಪ್ತಿ

Social Share

ಬೆಂಗಳೂರು, ಫೆ.7 – ದಾರಿಹೋಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಾಕು ತೋರಿಸಿ ಹೆದರಿಸಿ ಸರ ಅಪರಿಸುತ್ತಿದ್ದ ದರೋಡೆಕೋರನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

ಬನಶಂಕರಿ ಎರಡನೇ ಹಂತ ಸರಬಂಡೆ ಪಾಳ್ಯ ನಿವಾಸಿ ಪದ್ಮನಾಭ ಅಲಿಯಾಸ್ ಗೂಳಿ ಗುಂಡ ಅಲಿಯಾಸ್ ಗೂಳಿ ರವಿ(28) ಬಂಧಿತ ಆರೋಪಿ. ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭುವನೇಶ್ ಅಲಿಯಾಸ್ ಮೈಕಲ್ ವೈಬ್ರೇಟ್ ತಲೆಮರೆಸಿಕೊಂಡಿದ್ದಾನೆ.

ಫೆ. 2ರಂದು ಸಂಜೆ 6.20ರ ಸುಮಾರಿನಲ್ಲಿ ಸುನಂದಾ ಎಂಬುವರು ಕೆಲಸ ಮುಗಿಸಿಕೊಂಡು ಬನಶಂಕರಿ 2ನೇ ಹಂತದ ರಾಘವೇಂದ್ರ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಎದುರಿನಿಂದ ನಡೆದುಕೊಂಡು ಬಂದ ಇಬ್ಬರು ಸರಗಳ್ಳರು ಏಕಾಏಕಿ ಸುನಂದಾ ಅವರಿಗೆ ದೊಣ್ಣೆ ಹಾಗೂ ಕೈಗಳಿಂದ ಹೊಡೆದು ಚಾಕು ತೋರಿಸಿ ಎದುರಿಸಿ ಅವರ ಕೊರಳಿನಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಚಾಲಕ ಸಸ್ಪೆಂಡ್

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮ ಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಒಬ್ಬಾತನನ್ನು ಬಂಸಿ ಮಾಂಗಲ್ಯ ಸರ ವಶ ಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ.

ಆರೋಪಿ ಪದ್ಮನಾಭ ಈ ಹಿಂದೆ 2012ನೇ ಸಾಲಿನಿಂದ ಇಲ್ಲಿಯವರೆಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎರಡು ದರೋಡೆಗೆ ಸಂಚು ಪ್ರಕರಣ, ಸಿಕೆ ಅಚ್ಚುಕಟ್ಟು, ಬಸವನಗುಡಿ, ತಿಲಕ್‍ನಗರ, ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕನ್ನಕಳವು, ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಪಾಕಿಸ್ತಾನದಲ್ಲಿ ವಿಕಿಪಿಡಿಯಾ ನಿರ್ಬಂಧ ತೆರವು

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್, ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‍ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಪತ್ತೆ ಮಾಡಿ ಬಂಸಿ ವಿಚಾರಣೆ ನಡೆಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Chain, robber, police, arrested,

Articles You Might Like

Share This Article