ಬೆಂಗಳೂರು, ಜ. 21- ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಗಮನ ಸೆಳೆದು ಮಾಂಗಲ್ಯ ಸರ ಎಗರಿಸಿ ಪೊಲೀಸ್ ಠಾಣೆ ಪಕ್ಕದ ಮನೆಯಲ್ಲೇ ನೆಲೆಸಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿ 2.20 ಲಕ್ಷ ಮೌಲ್ಯದ ಸರ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬನಶಂಕರಿ ಮೂರನೇ ಹಂತ, ಕತ್ರಿಗುಪ್ಪೆ, ಸಿದ್ದಾರ್ಥಲೇಔಟ್ನ ಒಂದನೇ ಮುಖ್ಯರಸ್ತೆ ನಿವಾಸಿ ಮಂಜುನಾಥ ಅಲಿಯಾಸ್ ಜಿಮ್ ಮಂಜ(28) ಬಂಧಿತ ಸರಗಳ್ಳ. ಡಿ. 4ರಂದು ಸಂಜೆ 6.30ರ ಸುಮಾರಿನಲ್ಲಿ ರುಕ್ಮಿಣಿ ಎಂಬುವರು ಮನೆ ಸಮೀಪದ ಪಾರ್ಕ್ನಲ್ಲಿ ವಾಯು ವಿಹಾರ ಮುಗಿಸಿ ಬನಶಂಕರಿ ಮೂರನೇ ಹಂತ ಪೂರ್ಣ ಪ್ರಜ್ಞಾ ಬಡಾವಣೆ, 5ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ರಸ್ತೆಯಲ್ಲಿ ಎದುರಿನಿಂದ ಬಂದ ಯುವಕ ರುಕ್ಮಿಣಿ ಅವರಿಗೆ ಇಲ್ಲಿ ಪಾರ್ಕ್ ಎಲ್ಲಿದೆ ಅಮ್ಮ ಎಂದು ವಿಳಾಸ ಕೇಳಿದ್ದಾನೆ.
ಶಿಕ್ಷಕರನ್ನು ಅಪಮಾನಿಸುತ್ತಿರುವ ಲೆಫ್ಟಿನೆಂಟ್ ಗೌರ್ನರ್ : ಸಿಸೋಡಿಯ ಆಕ್ರೋಶ
ರುಕ್ಮಿಣಿ ಅವರು ಪಾರ್ಕ್ ಇರುವ ರಸ್ತೆ ಕಡೆ ಕೈಯನ್ನು ತೋರಿಸುತ್ತಿದ್ದಂತೆ ಆತ ರುಕ್ಮಿಣಿಯವರನ್ನು ಜೋರಾಗಿ ತಳ್ಳಿ, ಬೀಳಿಸಿ ಅವರ ಕತ್ತಿನಲ್ಲಿದ್ದ 45 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪಾರ್ಕ್ ಕಡೆ ಪರಾರಿಯಾಗಿದ್ದನು.
ಈ ಬಗ್ಗೆ ರುಕ್ಮಿಣಿ ಅವರು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ತನಿಖೆ ಕೈಗೊಂಡಿದ್ದರು.
ಸರಗಳ್ಳ ಸರ ಕಳ್ಳತನ ಮಾಡಿ ಮನೆಗೆ ಬಂದು ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದನು.
45 ದಿನ ಹರಸಾಹಸ: ಪೊಲೀಸರು ಸರಗಳ್ಳನಿಗಾಗಿ ಪ್ರಕರಣ ದಾಖಲಾದ ದಿನದಿಂದ ಶೋಧ ನಡೆಸುತ್ತಿದ್ದರು. ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ದೈತ್ಯ ವ್ಯಕ್ತಿಯೊಬ್ಬ ಸರಗಳ್ಳತನ ಮಾಡಿರುವುದು ಕಂಡು ಬಂದಿದೆ. ಆತನ ಜಾಡು ಹಿಡಿದು ಹುಡುಕಾಟ ನಡೆಸುತ್ತಿದ್ದಾಗ ಆತನ ವಿಳಾಸ ಠಾಣೆ ಪಕ್ಕದಲ್ಲೇ ತೋರಿಸುತ್ತಿತ್ತು.
20 ಕೆಜಿ ತೂಕ ಇಳಿಸಿಕೊಂಡಿದ್ದ ಆರೋಪಿ :
ಸರಗಳ್ಳ ತಾನು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳಬಾರದೆಂದು ತೂಕವನ್ನು 20 ಕೆಜಿ ಇಳಿಸಿಕೊಂಡು ಪೊಲೀಸರ ದಾರಿ ತಪ್ಪಿಸಿದ್ದನು. ಸಿಸಿ ಟಿವಿ ಯಲ್ಲಿ ಕಂಡು ಬಂದ ವ್ಯಕ್ತಿಯ ದೇಹಕ್ಕೂ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗೂ ಅಜಗಜಾಂತರ ವ್ಯತ್ಯಾಸ ಇದ್ದುದ್ದರಿಂದ ಪತ್ತೆ ಹಚ್ಚುವುದು ಪೊಲೀಸರಿಗೆ ಸ್ವಲ್ಪ ಕಷ್ಟವಾಗಿತ್ತು.
ಫೆ.6ಕ್ಕೆ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ
ಆದರೂ ಪೊಲೀಸರು 45 ದಿನಗಳ ಕಾಲ ಹರಸಾಹಸ ಪಟ್ಟು ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಕೊನೆಗೂ ಬಂಧಿಸಿ ಆರೋಪಿಯಿಂದ 44.700 ಗ್ರಾಂ ತೂಕದ 2.20 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಿಕೆ ಅಚ್ಚುಕಟ್ಟು ಠಾಣೆ ಇನ್ಸ್ಪೆಕ್ಟರ್ ಉದಯರವಿ ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದೆ. ಈ ಪತ್ತೆ ಕಾರ್ಯವನ್ನು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.
Chain, thief, man, arrested,