Saturday, September 23, 2023
Homeಇದೀಗ ಬಂದ ಸುದ್ದಿಚೈತ್ರಾ ಬಂಧನದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಯತ್ನಾಳ್ ವಾಗ್ದಾಳಿ

ಚೈತ್ರಾ ಬಂಧನದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಯತ್ನಾಳ್ ವಾಗ್ದಾಳಿ

- Advertisement -

ಬೆಂಗಳೂರು,ಸೆ.14-ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ವಿಚಾರದಲ್ಲಿ ತಮ್ಮನ್ನು ಎಳೆದು ತಂದ ಕಾಂಗ್ರೆಸ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ನಿಮ್ಮದೇ ಸರ್ಕಾರ ಇರೋದು ಅಲ್ಲವೇ, ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ, ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಚೈತ್ರಾ ಕುಂದಾಪುರ ಇದ್ದ ಫೋಟೋವನ್ನು ಟ್ವೀಟ್ ಮಾಡಿತ್ತು. ಅದಲ್ಲದೇ ಕಳ್ಳರು, ಸುಳ್ಳರು, ವಂಚಕರು ಕರ್ನಾಟಕ ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ ಎಂದು ಪ್ರಶ್ನಿಸಿತ್ತು. ಇದರಿಂದ ಕೆರಳಿದ ಯತ್ನಾಳ್, ನಿಮ್ಮದೇ ಸರ್ಕಾರ ಇರೋದು ಅಲ್ಲವೇ? ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ ಎಂದು ಕಿಡಿಕಾರಿದ್ದಾರೆ.

- Advertisement -

ಸ್ವಾಮೀಜಿ ಸಿಕ್ಕರೆ ದೊಡ್ಡವರ ನಂಟು ಹೊರಬೀಳಲಿದೆ : ಚೈತ್ರಾ ಕುಂದಾಪುರ ಬಾಂಬ್

ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ. ನಾನು ಹೇಳಿದ್ದು ಎಲ್ಲಾ ಪಕ್ಷದಲ್ಲೂ ದಲ್ಲಾಳಿಗಳು ಇರಬಹುದು ಅಂತ, ನನ್ನ ಹೇಳಿಕೆಯನ್ನು ತನಿಖೆ ಮಾಡಿಸಿ ಮೂರ್ಖರೇ! ನಿಮ್ಮಂತಹ ರೌಡಿ, ಪುಡಾರಿ, ಕೊತ್ವಾಲ್ ಶಿಷ್ಯರಿಗೆ ನನ್ನ ಹೇಳಿಕೆ ಎಲ್ಲಿ ಅರ್ಥ ಆಗಬೇಕು ಅಲ್ಲವೇ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ…!

ಟ್ವೀಟ್ ಮಾಡಿದ್ದ ಕಾಂಗ್ರೆಸ್!: ಚೈತ್ರಾ ಕುಂದಾಪುರ ಬಂಧನದ ಬಳಿಕ ಟ್ವೀಟ್ ಮಾಡಿದ್ದ ಕಾಂಗ್ರೆಸ್ಮ ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ರೂ. ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಟಿಕೆಟ್ಗೆ 7 ಕೋಟಿ ರೂ. ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ.

ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ, Pಖಐ ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು, ರೌಡಿ ಶೀಟರ್ಗಳೂ ಬಿಜೆಪಿಗರಿಗೆ ಆಪ್ತರು, ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಕರ್ನಾಟಕ ಬಿಜೆಪಿ ನಾಯಕರಿಗೆ ಆಪ್ತವಾಗುವುದೇಕೆ ಎಂದು ಪ್ರಶ್ನಿಸಿತ್ತು. ಬಿಜೆಪಿ ಅಂದರೆ ವಂಚಕರು, ಅತ್ಯಾಚಾರಿಗಳು, ಭ್ರಷ್ಟರಿಗೆ ಆಶ್ರಯತಾಣ! ವಂಚನೆ ಪ್ರಕರಣದ ಪ್ರಮುಖ ಆರೋಪಿ ಗಗನ್ ಕಡೂರು ಎಂಬುವವನು ಬಿಜೆಪಿಯ ಯುವ ಮೋರ್ಚಾದ ಕಾರ್ಯದರ್ಶಿ.

ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ವಂಚನೆಗೊಳಪಟ್ಟವರು ಬಿಜೆಪಿಗೆ ದೂರು ನೀಡಿದರೂ ಬಿಜೆಪಿ ಕಣ್ಮುಚ್ಚಿ ಕುಳಿತಿತ್ತು. ಪಕ್ಷದ ಹೆಸರಲ್ಲಿ ವಂಚನೆ ನಡೆದರೂ ದೂರು ನೀಡಲು ಮುಂದಾಗದೆ ಮುಚ್ಚಿಹಾಕಲು ಪ್ರಯತ್ನಿಸಿದ್ದೇಕೆ ಬಿಜೆಪಿ ಎಂದು ಕಾಂಗ್ರೆಸ್ ಕಿಡಿಕಾರಿತ್ತು.

#ChaitraKundapurCase, #Yatnal, #Attack, #Govt,

- Advertisement -
RELATED ARTICLES
- Advertisment -

Most Popular