ಮಹಿಳೆಗೆ ಸೋಮಣ್ಣ ಕಪಾಳಮೋಕ್ಷ, ಬಿಜೆಪಿ ನಾಯಕರು ಹೇಳೋದೇನು..?

Social Share

ಚಾಮರಾಜನಗರ/ಬೆಂಗಳೂರು, ಅ.23- ಪ್ರತಿ ಬಾರಿ ಚಾಮರಾಜಕ್ಕೆ ಬಂದಾಗಲೆಲ್ಲ ಈ ರೀತಿ ಡ್ರಾಮಾ ಮಾಡಿಸೋದು ಕಾಂಗ್ರೆಸ್ ಚಾಳಿ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ ಹಂಗಳ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಮಹಿಳೆಯೊಬ್ಬರು ಸಚಿವರಿಗೆ ದಮಕಿ ಹಾಕಿದಾಗ ಸೋಮಣ್ಣ ಅವರು ವಿನಯವಾಗಿಯೇ ಆಕೆಯನ್ನು ಸಮಾಧಾನ ಪಡಿಸಿದ್ದಾರೆ.

ಈ ವೇಳೆ ಇದನ್ನು ದೊಡ್ಡದು ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಿದ್ದಾರೆ. ಹಲವಾರು ಮಂದಿಗೆ ಇಲ್ಲಿ ಮನೆಯ ಹಕ್ಕು ಪತ್ರಗಳನ್ನು ನೀಡಲಾಗಿದೆ. ಹೈಡ್ರಾಮಾ ಮಾಡಿದ ಮಹಿಳೆಗೂ ಕೂಡ ಮನೆ ಸಿಕ್ಕಿದೆ.

BIG NEWS : ನೀಟ್ ಕೌನ್ಸೆಲಿಂಗ್ ನೋಂದಣಿ ದಿನಾಂಕ ವಿಸ್ತರಣೆ

ಈ ಘಟನೆಯ ಹಿಂದೆ ಕಾಂಗ್ರೆಸ್ ಗುಂಪಿನ ಪಾತ್ರವಿದೆ ಎಂದು ಗುಂಡ್ಲುಪೇಟೆಯ ಬಿಜೆಪಿ ಮುಖಂಡರು ಟೀಕಿಸಿದ್ದಾರೆ.
ಸೋಮಣ್ಣ ಅವರು, ನೇರವಾಗಿ ಮಾತನಾಡುತ್ತಾರೆ. ಏಕಾಏಕಿ ಆಕೆ ಅವರ ಕಾಲಿಗೆ ಬಿದ್ದು ಗೋಳಾಡುವುದನ್ನು ತಡೆಯಲು ಪ್ರಯತ್ನಿಸಿದ ವೇಳೆ ಈ ಘಟನೆ ನಡೆದಿದೆ.

ಸೋಮಣ್ಣ ಅವರ ಜನಪ್ರಿಯತೆಗೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ಸೋಮಣ್ಣ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ಚಾಮರಾಜ ನಗರ ಜಿಲ್ಲೆಯಲ್ಲಿ ನೂರಾರು ಜನರಿಗೆ ಹಕ್ಕುಪತ್ರಗಳನ್ನು ನೀಡಿದ್ದೇನೆ. ಆದರೆ ಯಾರನ್ನೂ ಕೂಡ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ.

ಒಂದೇ ಉಡಾವಣೆಯಲ್ಲಿ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ನಿನ್ನೆ ನಡೆದಿರುವ ಘಟನೆ ಬಗ್ಗೆ ಆ ಮಹಿಳೆಯೇ ನನಗೆ ಯಾರು ಹೊಡೆದಿಲ್ಲ ಎಂದು ಹೇಳುತ್ತಿದ್ದರು. ಕೆಲವರು ಸಮಾಜಿಕ ಜಾಲತಾಣದ ಮೂಲಕ ಕೆಲವರು ಕೆಟ್ಟ ಭಾವನೆ ಮೂಡಿಸುತ್ತಿದ್ದಾರೆ. ಇದಕ್ಕೆ ಹೆಚ್ಚಾಗಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಬಂದಾಗಲೆಲ್ಲ ಈ ರೀತಿ ಒಂದಲ್ಲ ಒಂದು ಗಲಾಟೆ ಮಾಡಿಸುತ್ತಾರೆ. ಅವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಸಚಿವ ಸೋಮಣ್ಣ ತಿರುಗೇಟು ನೀಡಿದ್ದಾರೆ.

Articles You Might Like

Share This Article