ಬೆಂಗಳೂರು, ಮಾ.17- ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಈ ನಡುವಲ್ಲೇ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿರುವ ಆಡಳಿತಾರೂಢ ಬಿಜೆಪಿ ಸರ್ಕಾರವು ಹಲವು ಯೋಜನೆಗಳಿಗೆ ಚಾಲನೆ ನೀಡುತ್ತಿದೆ.
ಅಸಂಖ್ಯಾತ ಭಕ್ತರ ಪಾಲಿನ ದೈವ ಮಾಯ್ಕರ ಮಾದಪ್ಪನ ನೆಲದಲ್ಲಿ ಮುಗಿಲೆತ್ತರದಲ್ಲಿರುವ 108 ಅಡಿ ಪ್ರತಿಮೆ ಮೊದಲನೇ ಹಂತದ ಕಾಮಗಾರಿ ಮುಗಿದಿದ್ದು ಮುಖ್ಯಮಂತ್ರಿ, ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಬಸವರಾಜ ಬೊಮ್ಮಾಯಿ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಆಗಲಿದೆ.
20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ.
ಗದಗದ ಸಿಎಸ್‍ಎಪಿ ಆರ್ಕಿಟೆP್ಟï ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎಂಬುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರುಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದಲ್ಲಿ ಬೃಹತ್ ಬಸವಣ್ಣನ ಪ್ರತಿಮೆಗಳ ರೂವಾರಿ ಇವರು.
ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ
ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದು.
ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣಾ ನೀತಿ ಸಂಹಿತೆ ಜಾರಿಯಾಗವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಸರ್ಕಾರವು ಮಲ್ಲೆ ಮಹದೇಶ್ವರ ಸ್ವಾಮಿ ಬೆಟ್ಟದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆಯ ಮಾದರಿಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿ ಬೃಹತ್ ಪ್ರಚಾರ ಆರಂಭಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ಪ್ರತಿಮೆ ಜೊತೆಗೆ ಭಕ್ತರು ನೀಡಿದ ಬೆಳ್ಳಿ ರಥವನ್ನು ಲೋಕಾರ್ಪಣೆ ಮಾಡಲು ಸರ್ಕಾರವು ತರಾತುರಿಯಲ್ಲಿದ್ದು, ಸರ್ಕಾರದ ಈ ನಡೆಗೆ ಹಲವು ಟೀಕೆಗಳು ಕೇಳಿ ಬರುತ್ತಿವೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಕಾರವು ಒಂದು ಎಕರೆ ಜಾಗದಲ್ಲಿ ಪ್ರತಿಮೆ ಹಾಗೂ ವಸ್ತು ಸಂಗ್ರಹಾಲಯಕ್ಕೆ 20 ಕೋಟಿ ರೂ. ವೆಚ್ಚ ಮಾಡಿದೆ.
ವಸ್ತು ಸಂಗ್ರಹಾಲಯದ ಕೆಲಸವು ಶೇ.50ಕ್ಕಿಂತಲೂ ಕಡಿಮೆ ಪೂರ್ಣಗೊಂಡಿದ್ದು, ರಸ್ತೆ ಕಾಮಗಾರಿ, ಉದ್ಯಾನವನಗಳು, ಕುಡಿಯುವ ನೀರು, ಶೌಚಾಲಯಗಳು ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳ ಕಾರ್ಯಗಳು ಪೂರ್ಣಗೊಂಡಿಲ್ಲ. ಈ ಕಾರ್ಯಗಳು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ
ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರ ಮಾರ್ಚ್ 18ರಂದು ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಇನ್ನು ಬೆಳ್ಳಿ ರಥದ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಕಾಮಗಾರಿ ಮುಗಿದ ಬಳಿಕವೇ ಉದ್ಘಾಟನೆ ಮಾಡಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸುತ್ತಿದೆ.
ವಾಹನ ಪಾರ್ಕಿಂಗ್, ಮೂಲಸೌಕರ್ಯಗಳಿಲ್ಲ : ಇಲ್ಲಿಗೆ ಭಕ್ತರು ಬರಲು ಸಮರ್ಪಕವಾದ ರಸ್ತೆ ನಿರ್ಮಾಣವಾಗಿಲ್ಲ. ಕುಡಿಯುವ ನೀರು, ಶೌಚಗೃಹ, ವಾಹನ ಪಾರ್ಕಿಂಗ್ ಮತ್ತು ಮೂಲಸೌಕರ್ಯಗಳಿಲ್ಲ. ಈ ರೀತಿ ಇಲ್ಲಗಳ ನಡುವೆ ಕಣ್ಣಿಗೆ ದೊಡ್ಡದಾಗಿ ಕಾಣುವಂತೆ ಸಿದ್ಧಗೊಂಡಿರುವ 108 ಅಡಿ ಪ್ರತಿಮೆ ಮಾತ್ರ ಉದ್ಘಾಟಿಸುತ್ತಿರುವುದು ಏತಕ್ಕೆ ಎಂದು ಭಕ್ತರು ಕಿಡಿಕಾರಿದ್ದಾರೆ.
Chamarajanagar, Male Mahadeshwara Statue, 1108-Ft, Basavaraj Bommai,