ಮತ್ತೆ ವಿವಾದಕ್ಕೆ ಬಂತು ಚಾಮರಾಜಪೇಟೆ ಮೈದಾನ

Social Share

ಬೆಂಗಳೂರು, ನ.3- ಮತ್ತೆ ಚಾಮರಾಜಪೇಟೆ ಮೈದಾನದ ವಿವಾದ ಪ್ರಾರಂಭವಾಗಿದ್ದು , ಸಚಿವ ಆರ್. ಅಶೋಕ್ ವಿರುದ್ಧ ಆಕ್ರೋಶ ಸೋಟಗೊಂಡಿದೆ.

ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದ ಸಚಿವರು, ಈಗ ನಾಪತ್ತೆಯಾಗಿದ್ದಾರೆ. ರಾಜ್ಯೋತ್ಸವಕ್ಕೆ ಅವಕಾಶ ನೀಡಿಲ್ಲ. 15 ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಅವಕಾಶ ನೀಡಬೇಕು ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಮುಖಂಡ ರುಕ್ಮಾಂನದ ತಿಳಿಸಿದ್ದಾರೆ.

ಮೈದಾನ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಸಚಿವ ಆಶೋಕ್, ಶಾಸಕ ಜಮೀರ್ ಅಹಮದ್, ಸಂಸದ ಪಿ.ಸಿ. ಮೋಹನ್ ಸೇರಿ ಇನ್ನು ಮುಂದೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬ ಹಾಗೂ ನಾಡ ಹಬ್ಬ ಆಚರಣೆ ಮಾಡುವುದಾಗಿ ಹೇಳಿದ್ದರು. ಆದರೆ ರಾಜ್ಯೋತ್ಸವ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯೋತ್ಸವನ್ನು ಸರ್ಕಾರವಾದರೂ ಮಾಡಲಿ, ಇಲ್ಲವೇ ನಮ್ಮ ಒಕ್ಕೂಟ ಮಾಡಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Articles You Might Like

Share This Article