ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ ಜಮೀರ್..?

Social Share

ಬೆಂಗಳೂರು,ಆ.9- ಈದ್ಗಾ ಮೈದಾನದಲ್ಲಿ ಇಷ್ಟು ದಿನ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಈಗ ಗಣೇಶೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದ ಚಾಮರಾಜಪೇಟೆಯ ಈದ್ಗಾ ಮೈದಾನ ಅಂದಿನ ಲಾಲ್ ಚೌಕ್ ಆಗಿ ಪರಿವರ್ತನೆಯಾಗುತ್ತಿದೆಯೇ? ಎಂದು ಪ್ರಶ್ನಿಸಿದೆ.

ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಮಾಡುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಿಪಬ್ಲಿಕ್ ಆಫ್ ಕನಕಪುರದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ? ಇದು ಸ್ವತಂತ್ರ ಭಾರತ. ಇಲ್ಲಿ ಪಾಳೆಗಾರಿಕೆ ನಡೆಸಲು ಮೀರ್ ಸಾದಿಕ್ ಅವರ ಪ್ರೋತ್ಸಾಹ ಇದೆಯೇ? ಎಂದು ಪ್ರಶ್ನಿಸಿದೆ.

Articles You Might Like

Share This Article