ಬೆಂಗಳೂರು,ಆ.17- ಕಳೆದ 75 ವರ್ಷದಲ್ಲಿ ರಾಷ್ಟ್ರ ಧ್ವಜ ಹಾರಿಸಿರದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿದೆ ಅದರಂತೆ ಮುಂಬರುವ ಗಣೇಶ ಹಬ್ಬವನ್ನು ಕೂಡಾ ಈ ಮೈದಾನದಲ್ಲಿ ಆಚರಿಸಲು ಸಿಎಂ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಮಾಡುವ ಕುರಿತು ಜಿಲ್ಲಾಡಳಿತಕ್ಕೆ ಮನವಿ ಪತ್ರಗಳು ಬಂದಿದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು ಅಲ್ಲದೆ ಈಗ ಆ ಜಾಗ ಕಂದಾಯ ಇಲಾಖೆಗೆ ಸೇರಿದೆ ಅಲ್ಲಿ ಏನು ಆಗಬೇಕು ಎಂದು ತೀರ್ಮಾನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು.
75 ವರ್ಷದಲ್ಲಿ ಆ ಮೈದಾನದಲ್ಲಿ ಧ್ವಜ ಹಾರಸಿರಲಿಲ್ಲ ಈಗ ನಾನು ಕಂದಾಯ ಸಚಿವನಾದ ಬಳಿಕ ಮೊದಲ ಭಾರಿ ಧ್ವಜ ಹಾರಸಿದ್ದೇವೆ ಇದಕ್ಕೆ ಅಲ್ಲಿನ ಸ್ಥಳಿಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವೀರ ಸಾವರ್ಕರ್ ಫೋಟೊವನ್ನು ಮುಸ್ಲಿಮರ ಏರಿಯಾದಲ್ಲಿ ಹಾಕಿಸಿದ್ಯಾಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಅಶೋಕ್, ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ, ಮುಸ್ಲಿಂ ಏರಿಯಾ ಅಂದರೆ ಅದು ಪಾಕಿಸ್ತಾನಕ್ಕೆ ಸೇರಿದ್ಯಾ ಭಾರತಕ್ಕೆ ಸೇರಿದ್ದಾ ಮುಸ್ಲಿಮರು ಇರುವ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಸಿದ್ದರಾಮಯ್ಯ ಎಂದು ಪ್ರಶ್ನೆ ಮಾಡಿದರು.
ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು, ಅಂಡಮಾನ್ ಜೈಲಿನಲ್ಲಿದ್ದವರು ಯಾರೂ ಬದುಕಿ ಬಂದಿಲ್ಲ, ಅಲ್ಲಿದ್ದವರು ಒಂದೋ ಖಾಯಿಲೆಯಿಂದ ಸಾಯುತ್ತಾರೆ ಇಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಅಂತಹ ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರ ನಾಯಕರಿಗೆ ಅಂತಹ ಶಿಕ್ಷೆ ಯಾಕೆ ಕೊಟ್ಟಿಲ್ಲ? ಟಿಪ್ಪು, ಹೈದರಾಲಿ ಎಂದು ಮೆರೆಯುತ್ತಾರಲ್ಲ.. ಅವರಿಗೆ ಯಾಕೆ ಕರಿನೀರಿನ ಶಿಕ್ಷೆ ನೀಡಿಲ್ಲ ಎಂದು ಗುಡುಗಿದರು.
ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೆÇೀಟೊ ಹಾಕೋಕೆ ಇವರನ್ನು ಯಾಕೆ ಕೇಳಬೇಕು? ಯಾವ ಯಾವ ಧರ್ಮದವರು ಇದ್ದಾರೆ ಎಂದು ಇವರನ್ನು ಕೇಳಿ ಹಾಕಬೇಕಾ? ಯಾವ ಧರ್ಮ, ಜಾತಿ ಇದ್ದಾರೆ ಅಂತ ನೋಡಿ ಫೋಟೊ ಹಾಕೋಕೆ ಸಂವಿಧಾನದ ಅಡಿ ನಿಯಮ ಇದ್ಯಾ ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕರು ಒಪ್ಪದೇ ಇರಬಹುದು ಆದರೆ ಸಾವರ್ಕರ್ ಒಬ್ಬ ದೇಶಭಕ್ತ ಎಂದು ಸಮರ್ಥಿಸಿಕೊಂಡರು.