ಈದ್ಗಾ ವಿವಾದ : ಭುಗಿಲೆದ್ದ ಆಕ್ರೋಶ, ಜಮೀರ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

Social Share

ಬೆಂಗಳೂರು, ಆ.9- ಚಾಮರಾಜಪೇಟೆ ಮೈದಾನದ ವಿವಾದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮೈದಾನದಲ್ಲಿ ಗಣೇಶ ಹಬ್ಬ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ನೀಡಲಾಗದು ಎಂದು ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಹಿಂದೂಪರ ಸಂಘಟನೆಗಳು ಮುಗಿಬಿದ್ದಿವೆ.

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಮತ್ತು ರಾಜ್ಯ ಹಬ್ಬಗಳನ್ನು ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲು ಅವಕಾಶವಿದೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ನೀಡಲಾಗದು. ಇದಕ್ಕೆ ನಮ್ಮ ಸಮ್ಮತಿಯೂ ಇಲ್ಲ ಎಂದು ಶಾಸಕರು ಹೇಳಿಕೆ
ನೀಡಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

ನಿನ್ನೆ ಮೈದಾನಕ್ಕೆ ಶಾಸಕರು ಭೇಟಿ ನೀಡಿದ್ದಾದರೂ ಏಕೆ, ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಯ ಪರಿಶೀಲನೆ ಎಂದು ಹೇಳಿ ಬೇರೆ ವಿಚಾರಕ್ಕೆ ಬಂದಿದ್ದರಾ ಎಂಬ ಹಲವು ಅನುಮಾನಗಳು ಕಾಡುತ್ತಿದ್ದು, ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲ ಎನ್ನಲು ಅವರ್ಯಾರು, ಮೈದಾನವೇನಾದರೂ ಅವರ ಸ್ವಂತ ಆಸ್ತಿಯೇ, ಅವರೇ ಗಳಿಸಿದ್ದಾ ಅಥವಾ ಅವರ ಪೂರ್ವಿಕರ ಆಸ್ತೀನಾ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಕೆಂಡ ಕಾರಿದ್ದಾರೆ.

ಆ.15ರಂದೇ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಕೂರಿಸುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ಸವಾಲು ಹಾಕಿದ್ದಾರೆ. 15 ದಿನಗಳ ಮುಂಚೆಯೇ ಗಣೇಶನನ್ನು ಕೂರಿಸಲು ಸಿದ್ಧತೆ ನಡೆಸಲಾಗಿದ್ದು, ಶಾಸಕರ ವಿರುದ್ಧ ಹಿಂದೂಪರ ಸಂಘಟನೆಗಳು ಕೆಂಡ ಕಾರುತ್ತಿವೆ.

Articles You Might Like

Share This Article