ಬೆಂಗಳೂರು,ಜು.26- ಮೈಸೂರಿನ ಚಾಮುಂಡೇಶ್ವರಿ ದೇಗುಲದ ಹುಂಡಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂ. ಹರಿದುಬಂದಿದೆ. ಆಷಾಢ ಮಾಸದಲ್ಲಿ ನಡೆಯುವ ವಿಶೇಷ ಪೂಜೆ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಹುಂಡಿಗೆ 2.33 ಕೋಟಿ ಹಣ ಸಂಗ್ರಹವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ, ದೇವಾಲಯದ ಪ್ರವೇಶದ ಟಿಕೆಟ್‍ನಿಂದ 1.3 ಕೋಟಿದಷ್ಟು ಹಣ ಸಂಗ್ರಹವಾಗಿದೆ.
ನಾಡದೇವತೆಯ ದರ್ಶನಕ್ಕೆ ಒಂದೇ ತಿಂಗಳಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹವಾಗಿದೆ. ಲಕ್ಷಾಂತರ ಭಕ್ತರು ದೇಗುಲ ದರ್ಶನಕ್ಕೆ ಆಗಮಿಸಿದ್ದರು. ಭಕ್ತರು ಅರ್ಪಣೆಯ ರೂಪದಲ್ಲಿ 2.33 ಕೋಟಿ ಸಂಗ್ರಹವಾಗಿದೆ. ನಿನ್ನೆ ದೇವಾಲಯದ ಆವರಣದಲ್ಲಿ 250 ಮಂದಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಹುಂಡಿಯಲ್ಲಿದ್ದ ದೇಣಿಗೆ ಹಣದ ಎಣಿಕೆ ಕಾರ್ಯ ನಡೆಸಿದರು.
ಇದರಲ್ಲಿ ರದ್ದಾದ 500 ಹಾಗೂ ಸಾವಿರ ಮುಖಬೆಲೆಯ ಒಂದು ಲಕ್ಷಕ್ಕೂ ಅಕ ನೋಟುಗಳು, ವಿದೇಶಿ ಕರೆನ್ಸಿಗಳು ಕೂಡ ದೊರೆತಿವೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಕಾರಿ ಸಿ.ಜೆ.ಕೃಷ್ಣ ಮಾಹಿತಿ ನೀಡಿದ್ದಾರೆ.