ಮೈಸೂರು ಜಿಲ್ಲಾಡಳಿತದಿಂದ ಚಾಮುಂಡಿ ದೇವಿಗೆ ಸೀರೆ

ಮೈಸೂರು, ಸೆ.25- ನಾಡಹಬ್ಬ ದಸರಾದ ಜಂಬೂ ಸವಾರಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ಮೆರವಣಿಯಲ್ಲಿ ಸಾಗುವ ಚಾಮುಂ ಡೇಶ್ವರಿ ಉತ್ಸವ ಮೂರ್ತಿಗೆ ಅಲಂಕರಿಸುವ ಸೀರೆಯನ್ನು ಜಿಲ್ಲಾಡಳಿತದಿಂದಲೇ ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ವಿ. ಸೋಮಣ್ಣ ಸೂಚಿಸಿದ್ದಾರೆ.

ಜಂಬೂ ಸವಾರಿಯಂದು ದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಹಲವು ಮಂದಿ ಸೀರೆಗಳನ್ನು ನೀಡುತ್ತಾರೆ. ನಮ್ಮ ಸೀರೆಯನ್ನೇ ದೇವಿಗೆ ಧರಿಸಬೇಕೆಂದು ಒತ್ತಾಯಿಸುತ್ತಾರೆ. ಇದರಿಂದ ಗೊಂದಲ ಉಂಟಾಗುತ್ತದೆ ಎಂದು ಪ್ರೊ. ಪಿ.ವಿ. ನಂಜರಾಜ ಅರಸು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮಾದೇಗೌಡ ಅವರು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸೋಮಣ್ಣ ಈ ಬಾರಿ ಜಿಲ್ಲಾಡಳಿತವೇ ಸೀರೆ ಖರೀದಿಸಲಿ ಎಂದು ತಿಳಿಸಿದರು.

ಇನ್ನು ಮುಂದೆ ಯಾರಿಂದಲೂ ಜಂಬೂ ಸವಾರಿಯ ದಿನದಂದು ದೇವಿಗೆ ಧರಿಸುವ ಸೀರೆಯನ್ನು ಪಡೆದುಕೊಳ್ಳಬೇಡಿ, ಜಿಲ್ಲಾಡಳಿತದಿಂದಲೇ ಸೀರೆಯನ್ನು ಖರೀದಿಸಿ ಉಡಿಸುವಂತೆ ಸಚಿವರು ಸೂಚಿಸಿದರು.