ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ, ವಾಹನ ಸಂಚಾರ ನಿಷೇಧ

Spread the love

ಮೈಸೂರು, ಅ.21- ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು , ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ 10 ದಿನಗಳಿಂದ ಮಳೆಯಾಗುತ್ತಿದ್ದು, ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು , ಬೆಟ್ಟದಿಂದ ನಂದಿಗೆ ತೆರಳುವ ಮಾರ್ಗದಲ್ಲಿ ಸುಮಾರು 60 ಅಡಿಯಷ್ಟು ಗುಡ್ಡ ಕುಸಿದಿದ್ದು, ರಸ್ತೆ ಭಾಗಶಃ ಹಾನಿಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಹಾಗೂ ವಾಹನ ಸಂಚಾರ ನಿಷೇಧಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಮಾರ್ಗದಲ್ಲಿ ಗುಡ್ಡ ಕುಸಿತವಾಗಿತ್ತು. ಮತ್ತೆ ರಾತ್ರಿ ಗುಡ್ಡ ಕುಸಿತವಾಗಿದ್ದು, ಮಳೆ ಹೆಚ್ಚಾದ ಕಾರಣ ಗುಡ್ಡ ಕುಸಿದಿದೆ.

Facebook Comments