ನಾಳೆಯೂ ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ : ಕೋಡಿಹಳ್ಳಿ ಚಂದ್ರಶೇಖರ್

Spread the love

ಬೆಂಗಳೂರು, ಡಿ.11- ಸರ್ಕಾರ ಕೂಡಲೇ ಮಾತುಕತೆ ನಡೆಸಿ ಸಾರಿಗೆ ನೌಕರರ ಸಮಸ್ಯೆಯನ್ನು ಪರಿಹರಿಸಬೇಕೆಂದು ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆಯೊಳಗೆ ನಮ್ಮ ಜತೆ ಮಾತುಕತೆ ನಡೆಸಲಿ. ನಮ್ಮ ಬೇಡಿಕೆ ಈಡೇರದಿದ್ದರೆ ನಾಳೆಯೂ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.

ತಕ್ಷಣ ಸಭೆ ಕರೆದು ಸಿಬ್ಬಂದಿಗಳ ಸಮಸ್ಯೆ ಆಲಿಸಬೇಕು. ಸಭೆ ವಿಫಲವಾದರೆ ನಮ್ಮ ಬೇಡಿಕೆ ಈಡೇರುವ ತನಕವೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.  ಸಾರಿಗೆ ಸಚಿವರು ಪ್ರತಿಭಟನಾಕಾರರನ್ನಾಗಲಿ, ಅಧಿಕೃತ ನೌಕರರನ್ನಾಗಲಿ, ಸಂಘಟನೆಗಳ ಮುಖಂಡರನ್ನಾಗಲಿ ಸಭೆಗೆ ಆಹ್ವಾನಿಸಿಲ್ಲ. ಹೀಗಾಗಿ ನೌಕರರ ಜತೆಯಾಗಿ ಪ್ರತಿಭಟನೆ ಮುಂದುವರೆಸುತ್ತೇವೆ.

ಈಗಾಗಲೇ ಕೆಲ ರಾಜ್ಯಗಳಲ್ಲಿ ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ಆದರೆ, ಕರ್ನಾಟಕದಲ್ಲೇಕೆ ಪರಿಗಣಿಸಿಲ್ಲ. ಇವರಿಗೂ ಸಹ ಸರ್ಕಾರಿ ನೌಕರರ ಸ್ಥಾನಮಾನ ದೊರಕಬೇಕೆಂಬುದೇ ನಮ್ಮ ಆಶಯ ಎಂದರು.

Facebook Comments