ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಚಿಕ್ಕಮಗಳೂರು.ಸೆ.2- ರಾಷ್ಟ್ರೀಯ ಹೆದ್ದಾರಿ-73 (ಹಳೆಯ ಸಂಖ್ಯೆ-234)ರ ಮಂಗಳೂರು-ವಿಲ್ಲಂಪುರ ರಸ್ತೆಯ 86.200 ರಿಂದ 90.200ಕಿಮೀ ಕೊಟ್ಟಿಗೆಹಾರದವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರ ವರದಿಯನ್ವಯ ಪ್ರಸ್ತುತ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿರುವುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು-ತುಮಕೂರು ರಸ್ತೆಯ 86.200ಕಿಮೀ

(ಚಿಕ್ಕಮಗಳೂರು ಜಿಲ್ಲಾಗಡಿ) 99.200ಕಿಮೀ (ಕೊಟ್ಟಿಗೆಹಾರ) ವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸೆ.1ರಿಂದ ಮುಂದಿನ ಆದೇಶದವರೆಗೂ ದಿನದ 24 ಗಂಟೆ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ತಿಳಿಸಿದ್ದಾರೆ.