ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಮೂವರು ಅರೆಸ್ಟ್

Social Share

ಬೆಂಗಳೂರು,ಫೆ.15- ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್‍ಲೈನ್‍ನಲ್ಲಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಒಡಿಶಾ ಮೂಲದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ರಾಜ್ಯದ ಭುವನೇಶ್ವರ್ ನಿವಾಸಿ ಕಾಳಿ ಪ್ರಸಾದ್ ರಾತ್ ಅಲಿಯಾಸ ಕಾಳಿ(38), ಮಹಾರಾಷ್ಟ್ರ ಮೂಲದ ಅಭಿಜಿತ್ ಅರುಣ ನೆಟಕೆ ಅಲಿಯಾಸ್ ಅಭಿಜಿತ್(34) ಮತ್ತು ಒಡಿಶಾದ ಅಭಿಷೇಕ್ ಮೊಹಾಂತಿ ಅಲಿಯಾಸ್ ಅಭಿಷೇಕ್(21) ಬಂಧಿತರು.
ಈ ಮೂವರನ್ನು ಮಹಾರಾಷ್ಟ್ರದ ಪುಣೆ ಮತ್ತು ಒಡಿಶಾದ ಭುವನೇಶ್ವರ್‍ನಲ್ಲಿ ಪೊಲೀಸರು ಬಂಸಿದ್ದಾರೆ. ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿರುವ ಐಬಿಎಂ ಕಂಪನಿಯಲ್ಲಿ ಎಚ್‍ಆರ್ ಮ್ಯಾನೇಜರ್ ಆಗಿರುವ ಅಭಿಜಿತ್ ರಾಯ್ ಅವರು ಜನವರಿ 13ರಂದು ತಮ್ಮ ಕಂಪನಿಯ ಹೆಸರು ಮತ್ತು ಲೋಗೋ(ಲಾಂಛನ) ಬಳಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆ ಐಬಿಎಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೆ ಐಬಿಎಂ ಕಂಪನಿಯ ಹೆಸರಿನಲ್ಲಿ ಜಾಬ್ ಆಫರ್ ಲೆಟರ್‍ಗಳನ್ನು ಕೊಟ್ಟು ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಐಬಿಎಂ ಕಂಪನಿಯ ಎಚ್‍ಆರ್ ಮ್ಯಾನೇಜರ್ ಆದ ಎಂ.ಆರ್.ಪ್ರದೀಪ್ ಅವರನ್ನು ಭೇಟಿ ಮಾಡಲು ತಿಳಿಸಿದ್ದು, ಅದರಂತೆ ಉದ್ಯೋಗಾಕಾಂಕ್ಷಿಗಳು ತಮ್ಮ ಕಂಪನಿಯನ್ನು ಸಂಪರ್ಕಿಸುತ್ತಿರುವುದಾಗಿ ಮತ್ತು ತಮ್ಮ ಕಂಪನಿಯಲ್ಲಿ ಪ್ರದೀಪ್ ಎಂಬ ಎಚ್‍ಆರ್ ಮ್ಯಾನೇಜರ್ ಯಾರೂ ಇಲ್ಲವೆಂದು, ಈ ರೀತಿ ಮೋಸ ಮಾಡಿರುವ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ವಿವರಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಪಿಗೆಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡು ಜ.20ರಂದು ಸಂಜೀವ್ ಗಂಗಾರಾಮ್ ಗೂರ್ಖಾ ಎಂಬ ಆರೋಪಿಯನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ಮೂವರು ವಂಚಕರ ಬಗ್ಗೆ ಬಾಯ್ಬಿಟ್ಟಿದ್ದನು. ವಂಚಕರು ಒಡಿಶಾ ಹಾಗೂ ಪುಣೆಯಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಹೊರರಾಜ್ಯಗಳಿಗೆ ತೆರಳಿ ಮೂವರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾನ್ಯತಾ ಟೆಕ್‍ಪಾರ್ಕ್‍ನ ಪ್ರತಿಷ್ಠಿತ ಕಂಪನಿಗಳಾದ ಐಬಿಎಂ, ಕಾಗ್ನಿಜೆಂಟ್ ಕಂಪನಿಗಳಲ್ಲಿ ಕೆಲಸದ ಆಮಿಷವೊಡ್ಡಿ ಮತ್ತು ಲಿವೊಸೊ ಟೆಕ್ನಾಲಜಿ ಪ್ರೈ.ಲಿ, ಇಸಿರೆಕ್ಯೂಟ್ ಇಂಡಿಯ ಪ್ರೈ.ಲಿ., ಮುಂತಾದ ನಕಲಿ ಕಂಪನಿಗಳ ಲೋಗೋಗಳನ್ನು ಸೃಷ್ಟಿಸಿಕೊಂಡು ಕೆಲಸ ಕೊಡಿಸುವುದಾಗಿ ಫೇಸ್‍ಬುಕ್, ನೌಕರಿ ಡಾಟ್ ಕಾಮ್, ಲಿಂಕ್‍ಡಿನ್ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ಗಳನ್ನು ಬಿತರಿಸುತ್ತಿದ್ದರು.
ಉದ್ಯೋಗಾಕಾಂಕ್ಷಿಗಳಿಗೆ ಇಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಕಲಿ ಜಾಬ್ ಆಫರ್ ಲೆಟರ್‍ಗಳನ್ನು ನೀಡಿ ತಾವು ನೀಡುವ ನಕಲಿ ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳು ವಾಸಕ್ಕೆ ಮನೆ ಹಾಗೂ ಫ್ಲಾಟ್‍ಗಳನ್ನು ಲೀಸ್‍ಗೆ ಸಂಪರ್ಕಿಸಿದವರನ್ನು ಮತ್ತು ಬಾಡಿಗೆದಾರರಿಂದಲೂ ಆನ್‍ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದು ಕಂಡುಬಂದಿದೆ. ಆರೋಪಿಗಳ ಬಂಧನದಿಂದ ಎಚ್‍ಎಸ್‍ಆರ್ ಲೇಔಟ್, ಮಾರತಹಳ್ಳಿ, ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆ ಮತ್ತು ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳ ವಿರುದ್ಧ ಈ ಹಿಂದೆ ಬೆಂಗಳೂರುನಗರದ ಜೀವನಭೀಮ ಪೊಲೀಸ್ ಠಾಣೆ ಮತ್ತು ಮಹಾರಾಷ್ಟ್ರದ ಪುಣೆಯ ಹಡಪ್‍ಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವ ಬಗೆ ಮಾಹಿತಿ ತಿಳಿದುಬಂದಿದೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಅನೂಪ್ ಎ.ಶೆಟ್ಟಿ ಮಾರ್ಗದರ್ಶನದಲ್ಲಿ ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಗಪ್ಪ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ನಾಗರಾಜ್, ಸಬ್‍ಇನ್‍ಸ್ಪೆಕ್ಟರ್‍ಗಳಾದ ಪ್ರವೀಣ್‍ಕುಮಾರ, ಮಧುಸೂದನ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಚರಣೆ ಕೈಗೊಂಡು ವಂಚಕರನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article