ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಎಳೆದೊಯ್ದ ಚಿರತೆ ..!

ಗಂಗಾವತಿ, ಮೇ 1-ಪಟ್ಟಣದ ಸಾಯಿ ನಗರದಲ್ಲಿ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿದ್ದು, ಪಟ್ಟಣದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಮಧ್ಯರಾತ್ರಿ ಸಾಯಿನಗರದ ಕಮರ್‍ಪಾಷ ಎಂಬುವರ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಷಯ ಹರಡುತ್ತಿದ್ದಂತೆ ಪಟ್ಟಣದ ಜನರು ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ.

ಇದುವರೆಗೂ ಪಟ್ಟಣದ ಸಮೀಪದ ಗ್ರಾಮಗಳಲ್ಲಿ ಆಗಾಗ್ಗೆ ಚಿರತೆಗಳು ದಾಳಿ ಮಾಡಿ ಸಾಕುಪ್ರಾಣಿಗಳನ್ನು ಎಳೆದೊಯ್ದಿದ್ದ ಉದಾಹರಣೆಗಳಿವೆ. ಆದರೆ ಇದೇ ಮೊದಲು ಪಟ್ಟಣಕ್ಕೆ ನುಗ್ಗಿ ಸಾಕು ನಾಯಿಯನ್ನು ಎಳೆದೊಯ್ದಿದಿರುವುದರಿಂದ ಜನರು ಭಯಭೀತರಾಗಿದ್ದಾರೆ.

ಕೂಡಲೇ ಅರಣ್ಯಾಧಿಕಾರಿಗಳು ಪಟ್ಟಣಕ್ಕೆ ನುಗ್ಗಿರುವ ಚಿರತೆಯನ್ನು ಹುಡುಕಿಸಿ ಹಿಡಿಯಬೇಕೆಂದು ಜನರು ಆಗ್ರಹಿಸಿದ್ದಾರೆ.

Sri Raghav

Admin