7 ದಶಕಗಳ ನಂತರ ಭಾರತಕ್ಕೆ ಬಂದ 8 ಚೀತಾಗಳು

Social Share

ಗ್ವಾಲಿಯರ್, ಸೆ 17 – ದೇಶದಲ್ಲಿ ಅಳಿದುಳಿದಿದೆ ಎಂದು ಘೋಷಿಸಿದ ನೋತರ ಏಳು ದಶಕಗಳ ನಂತರ ಭಾರತಕ್ಕೆ ನಮೀಬಿಯಾದಿಂದ 8 ಚೀತಾ ಗಳು ಇಲ್ಲಿಗೆ ತರಲಾಗಿದೆ. ಕಳೆದ ರಾತ್ರಿ ಆಫ್ರಿಕಾ ದೇಶದಿಂದ ಚೀತಾಗಳನ್ನು ವಿಶೇಷ ಮರದ ಪೆಟ್ಟಿಗೆಗಳಲ್ಲಿಇರಿಸಿ ವಿಶೇಷವಾಗಿ ಮಾರ್ಪಡಿಸಿದ ಬೋಯಿಂಗ್ ವಿಮಾನ ಸುಮಾರು 10 ಗಂಟೆ ಪ್ರಯಾಣಿಸಿ ಬೆಳಿಗ್ಗೆ 8 ಗಂಟೆಗೆ ಗ್ವಾಲಿಯರ್ ವಾಯುನೆಲೆಯಲ್ಲಿ ಇಳಿಯಿತು ಎಂದು ಅಧಿಕಾರಿಕಾರಿಗಳು ತಿಳಿಸಿದ್ದಾರೆ.

ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್‍ನಲ್ಲಿ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿ ನಂತರ ಅಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 10.45 ಕ್ಕೆ ಮೂರು ಚಿರತೆಗಳನ್ನು ಉದ್ಯಾನದ ಆವರಣಕ್ಕೆ ಬಿಟ್ಟರು.

ಕಳೆದ 2 ದಿನ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.ಪ್ರತಿಕೂಲ ಹವಾಮಾನದಿಂದಾಗಿ ಕೆಲವು ರಸ್ತೆಗಳನ್ನು ವಾಹನ ಸಂಚಾರಕ್ಕೆ ನಿರ್ಬಂಸಲಾಗಿತ್ತು.ಒಟ್ಟಾರೆ 70 ವರ್ಷದ ನಂತರ ಜಗತ್ತಿನ ವೇಗದ ಓಟದ ಪ್ರಾಣಿ ಚೀತಾಗಳು ಭಾರತದ ಮಣ್ಣಲ್ಲಿ ಹೆಚ್ಚೆ ಇಟ್ಟಿದೆ.

Articles You Might Like

Share This Article