ಉದ್ಯಾನವನಕ್ಕೆ ಇನ್ನೂ ಒಗ್ಗಿಕೊಳ್ಳದ ನಮೀಬಿಯಾ ಚೀತಾಗಳು

Social Share

ಭೋಪಾಲ್, ಡಿ 4- ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದ 12 ಚೀತಾಗಳು ಇಲ್ಲಿ 4 ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದು ಪರಿಸರಕ್ಕೆ ಇನ್ನು ಒಗ್ಗಿಕೊಂಡಿಲ್ಲ
ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳು ಸಣ್ಣ ಆವರಣಗಳಲ್ಲಿ ಇರಿಸಲ್ಪಟ್ಟಿದ್ದು ಚಲನವಲನ ಪರೀಕ್ಷಿಸಲಾಗುತ್ತದ್ದು ,ನೈಜ ಪ್ರಕಿಯೆ ಕಂಡುಬಂದಿಲ್ಲ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.

ಇದರ ಆರೋಗ್ಯದ ಬಗ್ಗೆ ಮತ್ತು ಸಾಮಥ್ರ್ಯ ಇನ್ನೂ ನಿರೀಕ್ಷೆಗೆ ತಕ್ಕಂತಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಚೀತಾ ತರಲು ಯೋಜಿಸಲಾಗಿತ್ತು ಆದರೆ ನಮೀಬಿಯಾದ ಅಧಿಕಾರಿಗಳು ಇನ್ನೂ ಭಾರತ ಸರ್ಕಾರದೊಂದಿಗೆ ತಿಳುವಳಿಕೆ ಪತ್ರ (ಎಂಒಯು) ಗೆ ಸಹಿ ಹಾಕಿಲ್ಲ.

ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

ಆದರೆ ಮಧ್ಯಪ್ರದೇಶದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ ಎಸ್ ಚೌಹಾಣ್ ಪ್ರಕಾರ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಬೀಳಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Cheetahs, Kuno National Park, Madhya Pradesh,

Articles You Might Like

Share This Article