ದಕ್ಷಿಣ ಭಾರತದ ಮೊಟ್ಟ ಮೊದಲ ಹಿಂದಿ ಸಾಕ್ಷರ ಪಂಚಾಯಿತಿ ಚೇಳನೂರು

Social Share

ಕೋಝಿಕ್ಕೋಡ್, ಅ.23- ದೇಶದಾದ್ಯಂತ ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಕೇರಳದ ಈ ಒಂದು ಸಣ್ಣ ಊರು ಇಡೀ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಸಂಪೂರ್ಣ ಹಿಂದಿಮಯ ಪ್ರದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.

ಹಿಂದಿ ಸಾಕ್ಷರತಾ ಪ್ರದೇಶವಾಗಿ ಹೊರ ಹೊಮ್ಮಿರುವ ಕೇರಳದ ಚೇಳನೂರನ್ನು ಮುಂದಿನ ಗಣರಾಜ್ಯೋತ್ಸವದ ವೇಳೆಗೆ ಸಂಪೂರ್ಣ ಹಿಂದಿ ಸಾಕ್ಷರ ಪಂಚಾಯತ್ ಎಂದು ಘೋಷಿಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಆಡಳಿತವಿರುವ ಚೇಳನೂರು ಪಂಚಾಯಿತಿ ಹಿಂದಿ ಸಾಕ್ಷರ ಪ್ರದೇಶವಾಗಿ ಹೊರಹೊಮ್ಮಿದ್ದು, ಇದು ದಕ್ಷಿಣ ಭಾರತದಲ್ಲೇ ಮೊದಲನೆಯದು ಎಂದು ಅಲ್ಲಿನ ಗ್ರಾ.ಪಂ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಹೆಚ್ಚಿರುವುದರಿಂದ ನಮ್ಮಲಿನ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಅದರ ಸೀಮಿತ ಹಣದಲ್ಲಿ ಈ ವಿಶಿಷ್ಟ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಸಹಜವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕೆಂಬ ಸಂಸದೀಯ ಸಮಿತಿಯ ಶಿಫಾರಸುಗಳು ದೇಶದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅದರಲ್ಲೂ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೇ ಹಿಂದಿ ಹೇರಿಕೆಗೆ ಅಪಸ್ವರ ಕೇಳಿ ಬಂದಿರುವುದರ ನಡುವೆಯೇ ಚೇಳನ್ನೂರ್ ಗ್ರಾಮ ಪಂಚಾಯತ್ ಹಿಂದಿ ಸಾಕ್ಷರ ಪಂಚಾಯಿತಿಯಾಗಿ ಹೊರಹೊಮ್ಮಿದೆ.

ಈ ಯೋಜನೆಯು ಅವರ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಿರುವ ಅತಿಥಿ ಕೆಲಸಗಾರರೊಂದಿಗೆ ಸಂವಹನ ನಡೆಸಲು ಮತ್ತು ವ್ಯವಹರಿಸಲು ಮೂಲಭೂತ ಹಿಂದಿ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಯೋಜನೆಯು ಸಹಾಯ ಮಾಡುತ್ತದೆ ಎಂಬ ಕಾರಣದಿಂದಾಗಿ ಈ ಕಾರ್ಯಕ್ರಮದಲ್ಲಿ ಜನರ ಅಪಾರ ಭಾಗವಹಿಸುವಿಕೆ ಖಚಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ

ಪಂಚಾಯತ್ ಅಧ್ಯಕ್ಷ ನೌಶೀರ್ ಮಾತನಾಡಿ, ಈ ಯೋಜನೆಯು 20-70 ವರ್ಷದೊಳಗಿನ ಪ್ರತಿಯೊಬ್ಬ ಹಳ್ಳಿಗರನ್ನು ಹಿಂದಿ ಸಾಕ್ಷರರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Articles You Might Like

Share This Article