ಬೆಂಗಳೂರು ಬೆಂಕಿ ಅನಾಹುತದಿಂದ ಸುಮಾರು 3ಕೋಟಿಗೂ ಹೆಚ್ಚು ನಷ್ಟ

ಬೆಂಗಳೂರು,ನ.11- ನಗರದ ಹೊಸಗುಡ್ಡದಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿ ದಾಸ್ತಾನು ಮಳಿಗೆಯ ಬೆಂಕಿ ಅನಾಹುತದಿಂದ ಸರಿ ಸುಮಾರು 3 ಕೋಟಿಗೂ ಹೆಚ್ಚು ನಷ್ಟವಾಗಿರುವ ಅಂದಾಜಿದೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ರೇಖಾ ಕೆಮಿಕಲ್ ಕಾಪೆರ್ರೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ರೇಖಾ ಕೆಮಿಕಲ್ ಇಂಡಸ್ಟ್ರೀಯ ದಾಸ್ತಾನು ಮಳಿಗೆಯಲ್ಲಿ ಸಂಭವಿಸಿದ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳ ಹರಸಾಹಸಪಟ್ಟಿತ್ತು.

ಧÀಗದಹಿಸುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಎರಡು ಅಗ್ನಿಶಾಮಕ ದಳಗಳು ನಿರಂತರವಾಗಿ ಪ್ರಯತ್ನ ನಡೆಸಿದ್ದವು. ಬೆಂಕಿಯ ಕೆನ್ನಾಲಿಗೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೆ ಭಾರೀ ಹಾನಿಯಾಗಿದೆ. ದಾಸ್ತಾನು ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟದ ಸದ್ದು ಕೇಳಿ ಬರುತ್ತಿದ್ದಂತೆಯೇ ನೆರೆಹೊರೆಯ ನಿವಾಸಿಗಳು ಎಚ್ಚೆತ್ತುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ಮನೆಯವರನ್ನು ಬೇರೆಡೆಗೆ ಕಳುಹಿಸಿದ್ದಾರೆ.

ಬೆಂಕಿ ನಂದಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ದಾಸ್ತಾನು ಮಳಿಗೆಯ ತಳಮಹಡಿಯ ಬೆಂಕಿ ಇಡೀ ಕಟ್ಟಡವನ್ನು ಸುಟ್ಟು ಕರಕಲು ಮಾಡಿದೆ.  ಕ್ಕಪಕ್ಕದ 10 ಕಟ್ಟಡಗಳಲ್ಲಿ ಸುಮಾರು 15 ಕುಟುಂಬಗಳು ವಾಸವಿದ್ದವು. ಗೋಡೌನ್ ಹಿಂಭಾಗದ ಮನೆಗೆ ಬೆಂಕಿಯ ಕೆನ್ನಾಲಿಗೆ ತಗುಲಿದೆ. ಮನೆಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣ, ಬಟ್ಟೆ, ದಾಖಲೆ ಪತ್ರಗಳು, ವಿವಿಧ ಕಂಪೆನಿಯ 7 ಕಾರುಗಳು ಹಾಗೂ ಅನೇಕ ವಾಹನಗಳು ಬೆಂಕಿಗಾಹುತಿಯಾಗಿವೆ.

ಕೆಮಿಕಲ್ ದಾಸ್ತಾನು ಮಳಿಗೆಯ ಸಮೀಪವೇ ಇದ್ದ ಪ್ಲಾಸ್ಟಿಕ್ ಫ್ಯಾಕ್ಟರಿಗೂ ಬೆಂಕಿ ಹೊತ್ತಿಕೊಂಡಿದ್ದು, ಅದು ಕೂಡ ಸುಟ್ಟು ಹೋಗಿದೆ. ನಷ್ಟದ ಅಂದಾಜು ಮೊತ್ತ ಸರಿಸುಮಾರು 7 ಕೋಟಿಗೂ ಹೆಚ್ಚು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದ್ದು, ಅದು ಮುಗಿದ ಬಳಿಕ ನಷ್ಟದ ವಾಸ್ತವ ಅಂದಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ಭಾರೀ ಪ್ರಮಾಣದ ಸ್ಪೋಟದ ಸದ್ದು ಕೇಳಿ ಬಂದಾಗ ನೆರೆ ಹೊರೆಯವರು ದೀಪಾವಳಿ ಸಂದರ್ಭವಾಗಿರುವುದರಿಂದ ಪಟಾಕಿ ಹೊಡೆಯುತ್ತಿರಬಹುದೆಂದು ಭಾವಿಸಿದ್ದಾರೆ. ಆದರೆ, ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡು ಹೊರಗೆ ಬಂದಿದ್ದಾರೆ.

ಅಕ್ರಮ ದಾಸ್ತಾನು: ಈ ದುರಂತಕ್ಕೆ ಕೆಮಿಕಲ್ ಫ್ಯಾಕ್ಟರಿಯ ಮಾಲಿಕರಾದ ಸಜ್ಜನ್‍ರಾಜ್ ಮತ್ತು ಪತ್ನಿ ಕಮಲ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಬೊಮ್ಮಸಂದ್ರದಲ್ಲಿರುವ ರೇಖಾ ಕೆಮಿಕಲ್ ಇಂಡಸ್ಟ್ರಿಯ ಕಚ್ಚಾ ವಸ್ತುಗಳನ್ನು ಅಕ್ರಮವಾಗಿ ಹೊಸಗುಡ್ಡದಹಳ್ಳಿಯಲ್ಲಿ ಸಂಗ್ರಹಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ದಾಸ್ತಾನು ಮಳಿಗೆಯಲ್ಲಿ ನಿನ್ನೆ ಬೆಳಗ್ಗೆ ನಾಲ್ಕು ಮಂದಿ ಸಿಬ್ಬಂದಿಗಳು ರಾಸಾಯನಿಕಗಳನ್ನು ಅನ್‍ಲೋಡ್ ಮಾಡುವಾಗ ಬೆಂಕಿ ಕಿಡಿ ಕಾಣಿಸಿಕೊಂಡು ಅನಾಹುತ ಸಂಭವಿಸಿದೆ. ಬೆಂಕಿ ಅನಾಹುತದ ಬಳಿಕ ಬಿಬಿಎಂಪಿ ರೇಖಾ ಕೆಮಿಕಲ್ ಇಂಡಸ್ಟ್ರಿಯ ದಾಸ್ತಾನು ಮಳಿಗೆಯ ಪರವಾನಗಿ ಪತ್ರವನ್ನು ಹುಡುಕುವ ಪ್ರಯತ್ನ ಮಾಡಿದೆ. ಆದರೆ, ಈವರೆಗೂ ಟ್ರೇಡ್ ಲೈಸೆನ್ಸ್ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಮಾಲೀಕರು ತಮ್ಮ ಬಳಿ ಪರವಾನಗಿ ಪತ್ರ ಇದೆ. ತಂದು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಕೇಸು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.
ರೇಖಾ ಕೆಮಿಕಲ್ ಫ್ಯಾಕ್ಟರಿಯ ದಾಸ್ತಾನು ಮಳಿಗೆಗಳು ಬೇರೆ ಕಡೆ ಎಲ್ಲೆಲ್ಲಿ ಇವೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ತಪಾಸಣೆ ಆರಂಭಿಸಿದ್ದಾರೆ. ಅನಧಿಕೃತವಾಗಿ ಎಲ್ಲೇ ದಾಸ್ತಾನು ಮಳಿಗೆ ಇದ್ದರೂ ಅದಕ್ಕೆ ಬೀಗ ಜಡಿಯಲು ಮುಂದಾಗಿದ್ದಾರೆ.

ಹೊಸಗುಡ್ಡದಹಳ್ಳಿ ಬೆಂಕಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರು, ಈ ದಾಸ್ತಾನು ಮಳಿಗೆಗೆ ಟ್ರೇಡ್ ಲೈಸೆನ್ಸ್ ಇಲ್ಲ ಎಂಬ ಮಾಹಿತಿ ಇದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಾಲೀಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಇದೆ. ನೆರೆಹೊರೆಯವರಿಗೆ ಸಂಭವಿಸಿರುವ ನಷ್ಟವನ್ನು ಭರಿಸುವ ಕುರಿತು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ. ಬೆಂಕಿ ಇನ್ನೂ ಪೂರ್ಣವಾಗಿ ನಂದಿಸಿಲ್ಲ. ಸ್ಪಿರಿಟ್ ಆಗಿರುವುದರಿಂದ ಸ್ಪೋಟಗೊಳ್ಳುವ ಆತಂಕವೂ ಇದೆ. ಮೊದಲು ನಾವು ಸುರಕ್ಷತೆಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಹೇಳಿದರು.