ಬೀಜಿಂಗ್, ಜ.16 – ಈಶಾನ್ಯ ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ನಾಪತ್ತೆಯಾಗಿದ್ದಾರೆ. ರಾಜಧಾನಿ ಬೀಜಿಂಗ್ನ ಪೂರ್ವದಲ್ಲಿರುವ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದ ಹೊರವಲಯದಲ್ಲಿ ಕಳೆದ ರಾತ್ರಿ ಈ ದುರಂತ ಸಂಭವಿಸಿದ್ದು ಘಟನೆಯಲ್ಲಿ 34 ಜನರು ಗಾಯಗೊಂಡಿದ್ದಾರೆ.
ರಾಸಾಯನಿಕ ಸಂಸ್ಕರಣಾ ಯಂತ್ರಗಳು, ಪೈಪ್ಗಳು ಮತ್ತು ಶೇಖರಣಾ ಪಾತ್ರೆಗಳ ಸಂಕೀರ್ಣದಿಂದ ಬೆಂಕಿ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದನ್ನು ಸ್ಥಳೀಯ ಆಡಳಿತ ಛಾಯಾಚಿತ್ರ ಬಿಡುಗಡೆ ಮಾಡಿದೆ.
ನೇಪಾಳದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ, 40ಕ್ಕೂ ಹೆಚ್ಚು ಮಂದಿ ಸಾವು..!
ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಮತ್ತು ಸ್ಥಳೀಯ ಪರಿಸರ ಇಲಾಖೆಯು ಪ್ರದೇಶದಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಉಂಟಾಗುವ ಪರಿಣಾಮ ನಿಯಮತ್ರಿಸುವ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಉಪನಗರದಲ್ಲಿರುವ ಪನ್ಶನ್ ಕೌಂಟಿಯ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
ದುರಂತಕ್ಕೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.
ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ನಿಯಮಿತವಾಗಿ ಮಾರಣಾಂತಿಕ ಕೈಗಾರಿಕಾ ಅಪಘಾತಗಳು ನಡೆಯುತ್ತಿದೆ.
Chemical, plant, explosion, north China, 2 killed, 12 missing,