ಬಾಂಬ್ ತಯಾರಿಕೆ ಮಾಹಿತಿ ಹೊಂದಿದ್ದ ಆರೋಪಿಗಳ ಬಂಧನ

Social Share

ಚೆನೈ, ನ.12- ಬಾಂಬ್ ತಯಾರಿಕೆಯ ಮಾಹಿತಿ ಹಾಗೂ ಐಸಿಸ್ ಸಂಘಟನೆಯ ಕರ ಪತ್ರ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಇರಾಕ್ ಮತ್ತು ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆ ಪರ ಪ್ರಚಾರದ ಕರ ಪತ್ರಗಳನ್ನು ಆರೋಪಿಗಳು ಹೊಂದಿದ್ದರು ಎನ್ನಲಾಗಿದೆ. ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಪೊಲೀಸರ ತಪಾಸಣಾ ಕೇಂದ್ರಗಳನ್ನು ತಪ್ಪಿಸಿ ತಿರುಗುತ್ತಿದ್ದರು.

ಅವರನ್ನು ಅಡ್ಡ ಹಾಕಿದ ಪೊಲೀಸರು ಹಿಡಿಯಲು ಯತ್ನಿಸಿದಾಗ ಆರೋಪಿಗಳು ಸ್ಥಳದಿಂದ ನುಣಚಿಕೊಂಡು ತಪ್ಪಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ಹೊಂದಿದ್ದ ಚೀಲವನ್ನು ಕಸಿದುಕೊಳ್ಳುವಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಯಶಸ್ವಿಯಾಗಿದ್ದಾರೆ.

ಕಾಲಮಿತಿಯೊಳಗೆ ಕಡತ ವಿಲೇವಾರಿ ಮಾಡುವಂತೆ ಸಿಎಂ ಎಚ್ಚರಿಕೆ

ಆ ಚೀಲದಲ್ಲಿ ಕರಪತ್ರಗಳು ಮತ್ತು ಸ್ಪೋಟಕ ತಯಾರಿಕೆ ಪ್ರಕ್ರಿಯೆ ಮತ್ತು ರಾಸಾಯನಿಕಗಳ ಕುರಿತು ಯೂ ಟ್ಯೂಬ್ ತರಬೇತಿ ವಿಡಿಯೋದಲ್ಲಿ ಲಭ್ಯ ಇರುವ ಮಾಹಿತಿಯ ಪ್ರಕಟಣೆಗಳು ಕಂಡು ಬಂದಿವೆ.

ಕೂಡಲೇ ಪೊಲೀಸರು ಆರೋಪಿಗಳು ಸಂಚರಿಸುತ್ತಿದ್ದ ಬೈಕ್‍ನ ನೋಂದಣಿ ಸಂಖ್ಯೆಯನ್ನು ಆಧರಿಸಿ ಬೆನ್ನತ್ತಿದ್ದಾರೆ. ನಗೂರ್ ಮೀರನ್‍ನನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಪೋಸ್ ಕೊಟ್ಟ ಅಶೋಕ್ ವಿರುದ್ಧ ಆಕ್ರೋಶ

ಉಗ್ರ ಸಂಘಟನೆಗೆ ಹಣ ಸಂಗ್ರಹಿಸಿದ ಆರೋಪದ ಮೇಲೆ ಕಳೆದ ಸೆಪ್ಟಂಬರ್‍ನಲ್ಲಿ ರಾಷ್ಟ್ರೀಯ ತನಿಖಾ ದಳ ಶಕುಲ್ ಹಮೀದ್ ಎಂಬಾತನನ್ನು ಬಂಧಿಸಿತ್ತು. ಬಳಿಕ ಮತ್ತೊಬ್ಬರ ಬಂಧನ ತಮಿಳುನಾಡಿನಲ್ಲಿ ಹರಡಿರುವ ಉಗ್ರ ಚಟುವಟಿಕೆಗಳ ಬಗ್ಗೆ ಆತಂಕ ಮೂಡಿಸಿದೆ.

Articles You Might Like

Share This Article