ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ 34ರ ಸಂಭ್ರಮ

Social Share

ರಾಜ್‍ಕೋಟ್, ಜ. 25- ಭಾರತದ ಮಹಾಗೋಡೆ, ಹಾಲಿ ಟೀಂ ಇಂಡಿಯಾದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಜೀವನದಿಂದ ನಿವೃತ್ತಿಗೊಂಡ ಭಾರತೀಯ ಟೆಸ್ಟ್ ಕ್ರಿಕೆಟ್‍ಗೆ ಹೊಸ ಆಯಾಮ ನೀಡಿದ ಚೇತೇಶ್ವರ ಪೂಜಾರ ಅವರು ಇಂದು ತಮ್ಮ 34ನೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು ಅವರಿಗೆ ಐಸಿಸಿ, ಬಿಸಿಸಿಐ, ಹಾಲಿ, ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.
ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಏಕದಿನ ಹಾಗೂ ಚುಟುಕು ಕ್ರಿಕೆಟ್‍ಗೆ ಹೆಚ್ಚು ಮಹತ್ವ ನೀಡದೆ ಟೆಸ್ಟ್ ರಂಗಕ್ಕೆ ಹೆಚ್ಚು ಒತ್ತು ನೀಡಿದ ಪೂಜಾರ ಅವರು ಭಾರತಕ್ಕೆ ಹಲವು ಸರಣಿ ಗೆಲುವನ್ನು ತಂದುಕೊಟ್ಟಿದ್ದಾರೆ, ಇತ್ತೀಚೆಗೆ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದರಿಂದ ಅವರ ನಿವೃತ್ತಿ ಕೂಗು ದಟ್ಟವಾಗಿ ಎದ್ದಿದೆ, ಆದರೆ ಕೆಲವು ಕ್ರಿಕೆಟ್ ಪಂಡಿತರು ಅವರಿಗೆ ಮತ್ತಷ್ಟು ಪಂದ್ಯಗಳ ಅವಕಾಶ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೇತೇಶ್ವರ ಪೂಜಾರ ಅವರು 100 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 18 ಶತಗಳನ್ನು ಗಳಿಸಿದ್ದಾರೆ. ಟೆಸ್ಟ್‍ನಲ್ಲಿ 6713 ರನ್ ಗಳಿಸಿರುವ ಪೂಜಾರ, 5 ಏಕದಿನ ಪಂದ್ಯಗಳಿಂದ 51 ರನ್‍ಗಳನ್ನು ಗಳಿಸಿದ್ದಾರೆ.
ಐಪಿಎಲ್‍ನಲ್ಲೂ ಕಾಣಿಸಿಕೊಂಡಿರುವ ಚೇತೇಶ್ವರ ಪೂಜಾರ ಆರ್‍ಸಿಬಿ ಸೇರಿದಂತೆ ವಿವಿಧ ತಂಡಗಳ ಪರ 30 ಪಂದ್ಯಗಳನ್ನಾಡಿದ್ದು 390 ರನ್‍ಗಳನ್ನು ಗಳಿಸಿದ್ದಾರೆ, ಟೆಸ್ಟ್ ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್ ಆಗಿದ್ದ ಪೂಜಾರ ಕಳೆದ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‍ನಲ್ಲಿ ಸ್ಥಾನ ಪಡೆದಿದ್ದರೂ ಒಂದೇ ಒಂದು ಪಂದ್ಯದಲ್ಲೂ ಕೂಡ ಅಖಾಡಕ್ಕೆ ಇಳಿದಿರಲಿಲ್ಲ.
ಪೂಜಾರ ಕ್ರಿಕೆಟ್ ಜೀವನದ ಕೆಲವು ಕುತೂಹಲ ಭರಿತ ಸಂಗತಿಗಳು :
* ಚೇತೇಶ್ವರ ಪೂಜಾರ ತಂದೆ ಅರವಿಂದ ಪೂಜಾರ, ಚಿಕ್ಕಪ್ಪ ಬಿಪಿನ್ ಪೂಜಾರ ಇಬ್ಬರೂ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಕೆಟ್ ಕೀಪರ್ ಪಾತ್ರ ನಿರ್ವಹಿಸಿದ್ದು, ಚೇತೇಶ್ವರ ಪೂಜಾರ ಎರಡೂವರೆ ವರ್ಷಗಳಲ್ಲೇ ಬ್ಯಾಟ್ ಹಿಡಿಯುತ್ತಿದ್ದ ಪರಿ ನೋಡಿದ ಅವರ ತಂದೆ ಮುಂದೆ ನನ್ನ ಮಗ ಶ್ರೇಷ್ಠ ಕ್ರಿಕೆಟ್ ಆಟಗಾರನಾಗುತ್ತಾನೆ ಎಂದು ಭವಿಷ್ಯ ನುಡಿದ್ದರು, ಅದರಂತೆ ಅವರು ಭಾರತ ತಂಡ ಕಂಡ ಶ್ರೇಷ್ಠ ಆಟಗಾರನಾಗಿ ಮುಂದುವರೆದಿದ್ದಾರೆ.
* ಚೇತೇಶ್ವರ ಪೂಜಾರ ತಮ್ಮ ಕ್ರಿಕೆಟ್ ಜೀವನದ ಆರಂಭದಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಅಲೌಂಡರ್ ಆಗಿ ಗುರುತಿಸಿಕೊಂಡಿದ್ದರು, ಆದರೆ ಅವರ ತರಬೇತುದಾರ, ಭಾರತ ತಂಡದ ಸರ್ವ ಶ್ರೇಷ್ಠ ಆಟಗಾರ ಕ್ರಶನ್ ಗರ್ವಿ ಅವರ ಸಲಹೆಯಂತೆ ಚೇತೇಶ್ವರ್ ಬ್ಯಾಟಿಂಗ್‍ನತ್ತ ಹೆಚ್ಚು ಗಮನ ಹರಿಸಿದರು.
* ಪೂಜಾರ ಕ್ರಿಕೆಟ್ ಬಗ್ಗೆ ಅಪ್ರತಿಮ ಪ್ರೇಮ ಹೊಂದಿದ್ದರೂ, 2005ರಲ್ಲಿ ಅವರ ತಾಯಿ ಕ್ಯಾನ್ಸರ್‍ನಿಂದ ನಿಧನರಾದಾಗ ಚೇತೇಶ್ವರ್ ಸೌರಾಷ್ಟ್ರ ಪರ ರಣಜಿ ಪಂದ್ಯವನ್ನಾಡುತ್ತಿದ್ದರು, ತಾಯಿಯ ಸಾವಿನ ಸುದ್ದಿ ತಿಳಿದು ಕೂಡ ನೋವಿನಲ್ಲೇ ರಾಜ್ಯದ ಪರ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಟೀಂ ಇಂಡಿಯಾದ ಮಾಜಿ ನಾಯಕರಾದ ಸಚಿನ್‍ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರು ಕೂಡ ಇದೇ ರೀತಿ ಅವರ ತಂದೆ ಮೃತಪಟ್ಟಾಗ ದೇಶ ಹಾಗೂ ರಾಜ್ಯವೇ ಮುಖ್ಯ ಎಂಬ ನೀತಿಯನ್ನು ಪಾಲಿಸಿದ್ದರು.
*2006ರಲ್ಲಿ ನಡೆದ ಅಂಡರ್ 19 ವಿಶ್ವಕಪ್‍ನಲ್ಲಿ 6 ಇನ್ನಿಂಗ್ಸ್‍ನಿಂದ 349 ರನ್ ಗಳಿಸಿದ ಚೇತೇಶ್ವರ ಪೂಜಾರ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಆಗ ಪೂಜಾರ 1 ಶತಕ ಹಾಗೂ 2 ಅರ್ಧಶತಕ ಗಳಿಸಿದ್ದರು.
* 2006ರ ಅಂಡರ್ 19 ವಿಶ್ವಕಪ್‍ನಲ್ಲಿ ಭಾರತ ರನ್ನರ್‍ಅಪ್ ಆಗಿತ್ತು, ಚೇತೇಶ್ವರ ಪೂಜಾರರೊಂದಿಗೆ ರೋಹಿತ್‍ಶರ್ಮಾ, ರವೀಂದ್ರಾಜಾಡೇಜಾ, ಶಹಬಾಜ್ ನದೀಮ್, ಪಿಯೂಸ್ ಚಾವ್ಲಾ ಅವರು ಕೂಡ ಸ್ಥಾನ ಪಡೆದಿದ್ದರು.
* ಟೆಸ್ಟ್‍ನಲ್ಲಿ ವೇಗವಾಗಿ 1000 ರನ್ ಪೂರೈಸಿದ 2ನೆ ಆಟಗಾರ ಎಂಬ ಖ್ಯಾತಿಗೆ ಚೇತೇಶ್ವರ ಪೂಜಾರ (11 ಪಂದ್ಯ) ಭಾಜನರಾದರು. ಸುನೀಲ್ ಗವಾಸ್ಕರ್ ಕೂಡ ಇಷ್ಟೇ ಪಂದ್ಯದಲ್ಲಿ ಸಹಸ್ರ ರನ್ ಸಿಡಿಸಿದ್ದರೆ, ವಿನೋದ್ ಕಾಂಬ್ಳಿ 12 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
* 2013ರಲ್ಲಿ ಐಸಿಸಿ ನೀಡುವ ಎಮರ್ಜೆಂಗ್ ಆಟಗಾರನಾಗಿ ಚೇತೇಶ್ವರ ಪೂಜಾರ ಗುರುತಿಸಿಕೊಂಡಿದ್ದರು.
* 2014ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಗೆ ಚೇತೇಶ್ವರ ಪೂಜಾರ ಅವರು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು.
* 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 525 ಎಸೆತಗಳಲ್ಲಿ 202 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಟೆಸ್ಟ್‍ನಲ್ಲಿ ಭಾರತದ ಪರ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
* ಟೆಸ್ಟ್ ಪ್ರವೀಣರಾಗಿರುವ ಚೇತೇಶ್ವರ ಪೂಜಾರ ಅವರು ಐಪಿಎಲ್‍ನಲ್ಲೂ ತಮ್ಮ ಬ್ಯಾಟಿಂಗ್ ಬಲ ತೋರ್ಪಡಿಸಿದ್ದಾರೆ. 2010ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸಿದ ಪೂಜಾರ 2011 ರಿಂದ 2013ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ, 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿ ತಮ್ಮ ಬ್ಯಾಟಿಂಗ್ ವೈಭವದಿಂದ ತಂಡವನ್ನು ರನ್ನರ್ ಅಪ್ ಆಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪೂಜಾರ 2015ರಲ್ಲಿ ಬಿಕರಿ ಆಗದೆ ಉಳಿದುಕೊಂಡರೂ ಕೂಡ 2021ರಲ್ಲಿ ಸಿಎಸ್‍ಕೆ ಪರ 50 ಲಕ್ಷಕ್ಕೆ ಪೂಜಾರ ಬಿಕರಿಯಾದರೂ ಆಡುವ ಅವಕಾಶವನ್ನು ಪಡೆದಿರಲಿಲ್ಲ.

Articles You Might Like

Share This Article