ಛತ್ತೀಸ್‍ಗಢ ವಿಧಾನಸಭೆ ಉಪ ಸ್ಪೀಕರ್ ಮನೋಜ್ ಸಿಂಗ್ ಹೃದಯಾಘಾತದಿಂದ ನಿಧನ

Social Share

ಕಂಕೇರ್.ಅ,16 -ಛತ್ತೀಸ್‍ಗಢ ವಿಧಾನಸಭೆಯ ಉಪ ಸ್ಪೀಕರ್ ಮತ್ತು ಆಡಳಿತಾರೂಢ ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಮಾಂಡವಿ ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ತಡ ರಾತ್ರಿ 58 ವರ್ಷದ ಮಾಂಡವಿ ಅವರಿಗೆ ಹೃದಯಾಘಾತವಾಗಿ ಧಮ್ತಾರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬೆಳಿಗ್ಗೆ ನಿಧನರಾದರು ಎಂದು ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ತಿಳಿಸಿದ್ದಾರೆ.

ಕಂಕೇರ್ ಜಿಲ್ಲೆಯ ಭಾನುಪ್ರತಾಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಂಡವಿ ಅವರು ಕಳೆದ ರಾತ್ರಿ ಚರಮಾ ಪ್ರದೇಶದ ತಮ್ಮ ಸ್ವಗ್ರಾಮ ನಾಥಿಯಾ ನವಗಾಂವ್‍ನಲ್ಲಿದ್ದರು. ರಾತ್ರಿ ಉಸಿರಾಟ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡ ನಂತರ ಮೊದಲು ಚರಮಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು , ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಧಮ್ತಾರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಐಸಿಯುನಲ್ಲಿ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿ ಜೀವ ಉಳಿಸಲು ಪ್ರಯತ್ನಿಸಿದರು ಆದರೂ ಮುಂಜಾನೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ಮೂರು ಬಾರಿ ಶಾಸಕರಾಗಿದ್ದ ಅವರು ಬಸ್ತಾರ್ ಪ್ರದೇಶದಲ್ಲಿ ಕಂಗ್ರೇಸ್ ಪಕ್ಷದ ಪ್ರಮುಖ ಬುಡಕಟ್ಟು ನಾಯಕರಾಗಿದ್ದರು ಮಾಂಡವಿ ಅವರು 2000 ಮತ್ತು 2003 ರ ನಡುವೆ ರಾಜ್ಯದಲ್ಲಿ ಅಜಿತ್ ಜೋಗಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಗೃಹ ಮತ್ತು ಕಾರಾಗೃಹಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Articles You Might Like

Share This Article