ಛತೀಸ್‍ಗಡದಲ್ಲಿ ಹೆಚ್ಚುತ್ತಿರುವ ಆನೆಗಳ ಸಾವು

Social Share

ರೈಗರ್,ಫೆ.5- ಛತ್ತಿಸ್‍ಗಡದ ರೈಗರ್ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಐದು ಆನೆಗಳು ಮೃತಪಟ್ಟಿದ್ದು, ನಿನ್ನೆ ಮತ್ತೊಂದು ಆನೆಯ ಮೃತದೇಹ ಪತ್ತೆಯಾಗಿದೆ.

ರೈಗರ್ ಜಿಲ್ಲೆಯ ಧರ್ಮಜೈಗರ್ ಅರಣ್ಯ ಪ್ರದೇಶದಲ್ಲಿ ಗ್ರೆಸ ಗ್ರಾಮದ ವ್ಯಾಪ್ತಿಯಲ್ಲಿ 70 ವರ್ಷದ ಹೆಣ್ಣಾನೆಯ ಕಳೆಬರಹ ಪತ್ತೆಯಾಗಿದೆ. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮೇಲ್ನೋಟಕ್ಕೆ ವಯೋಸಹಜ ಸಮಸ್ಯೆಗಳಿಂದ ಆನೆ ಮೃತಪಟ್ಟಿದೆ ಎಂದು ಭಾವಿಸಲಾಗಿದೆ.

ಆದರೂ ವೈದ್ಯಕೀಯ ವರದಿಯಿಂದ ಸಾವಿನ ನಿಖರ ಕಾರಣಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

58 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪ್ರಾಪ್ತ ಬಾಲಕ

ಚತ್ತಿಸ್‍ಗಡದಲ್ಲಿ ಇತ್ತೀಚೆಗೆ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ನಾಲ್ಕು ತಿಂಗಳಲ್ಲಿ ಒಟ್ಟು ಆರು ಆನೆಗಳು ಮೃತಪಟ್ಟರೆ, ಐದು ವರ್ಷದಲ್ಲಿ 70ಕ್ಕೂ ಹೆಚ್ಚು ಆನೆಗಳು ಸಾವೀಗಿಡಾಗಿವೆ ಎಂದು ತಿಳಿದು ಬಂದಿದೆ.

Chhattisgarh, Elephant, Found, Dead, Forest, Raigarh,

Articles You Might Like

Share This Article