ರಾಯ್ಪುರ, ಜು.20 – ಭಯೋತ್ಪಾದನೆ ಹಣ ಸಂದಾಯ ಮಾಡುತ್ತಿದ್ದ ವ್ಯಕ್ತಿಯನ್ನು ಛತ್ತೀಸ್ಗಢ ಪೊಲೀಸರು ಜಾರ್ಖಂಡ್‍ನಲ್ಲಿ ಬಂಧಿಸಿದ್ದಾರೆ. ಕಳೆದ 2013ರಿಂದ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಶ್ರವಣ್ ಕುಮಾರ್ ಮಂಡಲ್ (41) ಅವರನ್ನು ಭಯೋತ್ಪಾದನಾ ನಿಗ್ರಹ ದಳ ರಾಯ್ಪುರ ಪೊಲೀಸರ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕ ಮತ್ತು ಜಾರ್ಖಂಡ್ ದಿಯೋಘರ್ ಜಿಲ್ಲಾಯ ಪೊಲೀಸರು ನಡೆಸಿದ ಜಮಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಜಾಕಾರಿ ಪ್ರಶಾಂತ್ ಅಗರವಾಲ್ ಹೇಳಿದ್ದಾರೆ.
ಭಯೋತ್ಪಾದಕ ಸಂಘಟನೆಗಳಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತು ಇಂಡಿಯನ್ ಮುಜಾಹಿದೀನ್ ಜೊತೆ ನಂಟು ಹೊಂದಿರುವ ಜನರ ಖಾತೆಗಳಿಗೆ ತನ್ನ ಬ್ಯಾಂಕ್ ಖಾತೆಯ ಮೂಲಕ ಹಲವು ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದ ಎಂದು ಅಕಾರಿ ತಿಳಿಸಿದ್ದಾರೆ.
2013 ರಲ್ಲಿ, ಟ್ರಾನ್ಸ್ಪೋಟ್ ನಗರದಲ್ಲಿ ರಸ್ತೆ ಬದಿಯ ಉಪಾಹಾರ ಗೃಹವನ್ನು ನಡೆಸುತ್ತಿದ್ದ ೀರಜ್ ಸಾವೊ ಎಂಬಾತನನ್ನು ಪಾಕಿಸ್ತಾನಿ ಪ್ರಜೆ ಖಾಲಿದ್ ಎಂಬಾತ ಹಣ ಪಡೆದು ತನ್ನ ಬ್ಯಾಂಕ್ ಖಾತೆಯ ಮೂಲಕ ಇಂಡಿಯನ್ ಮುಜಾಹಿದೀನ್ ಮತ್ತು ಸಿಮಿ ಜೊತೆ ನಂಟು ಹೊಂದಿರುವ ಜನರಿಗೆ ವರ್ಗಾಯಿಸಿದ್ದನೆಂದು ಅಗರವಾಲ್ ಹೇಳಿದ್ದಾರೆ.
ರಾಯ್ಪುರದ ಖಮ್ತರಾಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ 2013ರಿಂದ ಮಂಡಲ್ ತಲೆಮರೆಸಿಕೊಂಡಿದ್ದ ರಾಯ್ಪುರದ ನ್ಯಾಯಾಲಯವು ಇತ್ತೀಚೆಗೆ ಬಯೋತ್ಪಾದನೆ ಪ್ರಕರಣದಲ್ಲಿ ಬಿಹಾರ ಮೂಲದ ೀರಜ್ ಸಾವೊ, ಪಪ್ಪು ಮಂಡಲ್ ಮತ್ತು ಕರ್ನಾಟಕದ ಜುಬೆರ್ ಹುಸೇನ್ ಮತ್ತು ಆಯೇಷಾ ಬಾನೊ ಅವರನ್ನು ದೋಷಿಗಳೆಂದು ಘೋಷಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಇವರ ಖಾತೆಗೆ ಮಂಡಲ್ ನೀಡಿದ್ದ ಹಣ ಸಂದಾಯವಾಗಿತ