ಕಾಡು ಹಂದಿಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿ ಬಲಿದಾನವಾದ ಮಹಿಳೆ

Social Share

ಕೊರ್ಬಾ,ಫೆ.27- ತನ್ನ ಮಗಳ ಮೇಲೆ ದಾಳಿ ಮಾಡಿದ ಕಾಡು ಹಂದಿಯೊಂದಿಗೆ ಹೋರಾಟ ನಡೆಸಿದ ಧೀರ ಮಹಿಳೆಯೊಬ್ಬಳು, ತನ್ನ ಪ್ರಾಣ ತ್ಯಾಗ ಮಾಡಿ ಮಗಳನ್ನು ರಕ್ಷಿಸಿರುವ ಘಟನೆ ಛತ್ತೀಸ್‍ಗಡದ ಕೋರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಪಸನ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಲಿಯಮಾರ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ದುವಾಶಿಯಾ ಬಾಯಿ (45) ಮತ್ತು ಆಕೆಯ ಮಗಳು 11 ವರ್ಷದ ರಿಂಕಿ ಮಣ್ಣು ತರಲು ಸಮೀಪದ ಜಮೀನಿಗೆ ತೆರಳಿದ್ದರು. ಮಹಿಳೆ ಗುದ್ದಲಿಯಿಂದ ಮಣ್ಣು ಅಗೆಯುವಾಗ ಇದ್ದಕ್ಕಿಂತೆ ಕಾಡುಹಂದಿ ಅಲ್ಲಿಗೆ ಆಗಮಿಸಿ ರಿಂಕಿ ಮೇಲೆ ದಾಳಿ ಮಾಡಲು ಮುನ್ನುಗ್ಗಿತ್ತು. ತನ್ನ ಮಗಳನ್ನು ರಕ್ಷಿಸಿಕೊಳ್ಳಲು ದುವಾಶಿಯಾ ತನ್ನ ಕೈನಲ್ಲಿದ್ದ ಗುದ್ದಲಿಯಿಂದಲೇ ಕಾಡುಮೃಗದೊಂದಿಗೆ ಹೋರಾಟಕ್ಕಿಳಿದರು.

ಅಗ್ನಿಪತ್ ಯೋಜನೆಗೆ ನ್ಯಾಯಾಲಯದ ಬೆಂಬಲ : ಆಕ್ಷೇಪಣಾ ಅರ್ಜಿಗಳು ವಜಾ

ಸತತ ಹೋರಾಟದ ಮೂಲಕ ಮಹಿಳೆ ಕಾಡುಹಂದಿಯನ್ನು ಕೊಂದಿದ್ದಾರೆ. ಆದರೆ ಕಾಡು ಹಂದಿಯ ಮಾರಣಾಂತಿಕ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪಸನ್ ಅರಣ್ಯಾಧಿಕಾರಿ ರಾಮನಿವಾಸ್ ದಹಾಯತ್ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರದ ಆರಂಭಿಕ ಮೊತ್ತ 25 ಸಾವಿರ ರೂಪಾಯಿಗಳನ್ನು ಕುಟುಂಬದ ಸದಸ್ಯರಿಗೆ ನೀಡಲಾಗಿದೆ. ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಉಳಿದ 5.75 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Chhattisgarh, Woman, Dies, Fighting, Wild Boar, Save, Daughter,

Articles You Might Like

Share This Article