ವಾಷಿಂಗ್ಟನ್,ಫೆ.18- ಉದ್ಯಮಿ ಗೌತಮ್ ಆದಾನಿ ಕುರಿತ ಹಿಂಡನ್‍ಬರ್ಗ್ ಸಂಶೋಧನಾ ವರದಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಅಮೆರಿಕದ ಶತಕೋಟಿ ಬಂಡವಾಳ ಹೂಡಿಕೆದಾರ ಜಾರ್ಜ್ ಸೋರಸ್ ನೀಡಿರುವ ಹೇಳಿಕೆ ನಂಬಲರ್ಹವಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಸೋರಸ್ ಈ ಹಿಂದೆ ನೀಡಿದ್ದ ಹೇಳಿಕೆಗಳು ಅಪ್ರಬುದ್ದವಾಗಿದ್ದವು. ಈಗ ನೀಡಿರುವ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಚಿದು ಟ್ವಿಟ್ ಮಾಡಿದ್ದಾರೆ.
ಸೋರಸ್ ಅವರ ಹೇಳಿಕೆಯನ್ನು ಗಮನಿಸಿದರೆ ಅವರು, ಪ್ರಜಾಸತಾತ್ಮಕವಾಗಿ ರಚನೆಯಾದ ಸರ್ಕಾರವನ್ನು ಕೆಡವುವ ಉದ್ದೇಶ ಹೊಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಚಿದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಯಾರು ಅಧಿಕಾರ ನಡೆಸಬೇಕು ಎಂಬುದನ್ನು ಭಾರತೀಯರು ನಿರ್ಧರಿಸುತ್ತಾರೆ. ಅದರ ಬಗ್ಗೆ ಸೋರಸ್ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ
ನಮ್ಮ ದೇಶದ ಪರಿಸ್ಥಿತಿ ಕುರಿತಂತೆ ಜಾರ್ಜ್ ಸೋರಸ್ ನೀಡಿರುವ ಹೇಳಿಕೆಯ ಬದಲು ಭಾರತದ ನ್ಯೂನ್ಯತೆಗಳ ಬಗ್ಗೆ ನೂರಿಯಲ್ ರೌಬಿನಿ ಅವರ ಮಾತುಗಳನ್ನು ಆಲಿಸುವುದು ಸೂಕ್ತ ಎಂದು ಚಿದು ಸಲಹೆ ನೀಡಿದ್ದಾರೆ.
Chidambaram, George Soros, row,