ಬೆಂಗಳೂರು,ಸೆ.26- ಕಾಂಗ್ರೆಸ್ ಪೇ ಸಿಎಂ ಅಭಿಯಾನದ ಮೂಲಕ ಬಿಜೆಪಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ಹಿನ್ನೆಲೆ ಪೇ ಸಿಎಂನ್ನು ಪೇ ಟು ಚೀಫ್ ಮಿನಿಸ್ಟರ್ ರೆಲೀಫ್ ಫಂಡ್ ಹೆಸರಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ವ್ಯಾಪ್ತಿಗೆ ತರವಂತೆ ಮಾಜಿ ಉಪಸಭಾಪತಿ ಎಂ.ಕೆ ಪ್ರಾಣೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಯನ್ನು ಡಿಜಿಟಲ್ ಮಾಡುವ ಮುಖಾಂತರ ಪೇ ಟು ಚೀಫ್ ಮಿನಿಸ್ಟರ್ ರೆಲೀಫ್ ಫಂಡ್(ಸಿಎಂಆರ್ಎಫ್) ಹೆಸರಿನಲ್ಲಿ ಕಿಯೋನಿಕ್ಸ್ನಂತಹ ಸಂಸ್ಥೆ ವತಿಯಿಂದ ಒಂದು ಡಿಜಿಟಲ್ ಪೇಮೆಂಟ್ ಆ್ಯಪ್ನ್ನು ಸಿದ್ಧಪಡಿಸಬೇಕು.
ಇದರ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಗೆ ರಾಜ್ಯದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಸಂಕಷ್ಟದಲ್ಲಿರುವ ರಾಜ್ಯದ ಬಡ ಕುಟುಂಬಗಳ ನೆರವಿಗೆ ಧಾವಿಸಲು ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಯಿಂದ ಸರ್ಕಾರ ನೊಂದ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿದ್ದು, ರಾಜ್ಯದ ಐಟಿ ಬಿಟಿ ಕಂಪನಿಗಳಿಂದ, ಸಿಎಸ್ಆರ್ ಫಂಡ್ನಿಂದ ಮತ್ತು ದಾನಿಗಳಿಂದ ದೇಣಿಗೆ ಸಂದಾಯವಾಗುತ್ತಿದೆ.
ನೆರವು ನೀಡಲು ಆಸಕ್ತ ಸಾರ್ವಜನಿಕರಿಗೆ, ಯುವ ಪೀಳಿಗೆಯವರಿಗೆ ಅನುಕೂಲವಾಗುವಂತೆ ಮತ್ತು ಮುಂದಿನ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಯನ್ನು ಡಿಜಿಟಲ್ ವ್ಯಾಪ್ತಿಗೆ ತರಲು ಸರ್ಕಾರ ಕ್ರಮಕೈಗೊಂಡಲ್ಲಿ ಹೆಚ್ಚಿನ ದೇಣಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿ ಹೆಸರಿನಲ್ಲಿ ಪೇಸಿಎಂನ್ನು ಪೇ ಟು ಚೀಫ್ ಮಿನಿಸ್ಟರ್ ರೆಲೀಫ್ ಫಂಡ್ (ಸಿಎಂಆರ್ಎಫ್) ಎಂಬ ಡಿಜಿಟಲ್ ಆ್ಯಪ್ನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಕೋರಿದ್ದಾರೆ.