ಚಿಕ್ಕಬಳ್ಳಾಪುರ,ಜ.1- ಹೊಸ ವರ್ಷ ಸಂಭ್ರಮದ ಪಾರ್ಟಿ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಚಿಂತಾಮಣಿಯ ಐಮರೆಡ್ಡಿಹಳ್ಳಿ ನಿವಾಸಿ ನವೀನ್ ರೆಡ್ಡಿ (28) ಕೊಲೆಯಾದ ಯುವಕ. 2023ನೇ ನೂತನ ವರ್ಷದ ಸಂಭ್ರಮಾಚರಣೆಗಾಗಿ ಸ್ನೇಹಿತರಾದ ದೊಡ್ಡ ಗಂಜೂರು ಗ್ರಾಮದ ನವೀನ್ ರೆಡ್ಡಿ, ಬೈರೆಡ್ಡಿ, ಪುನೀತ್, ಕಿರಣ್ ಜೊತೆಗೂಡಿ ಪಾರ್ಟಿ ಮಾಡಲು ಐಮಾರೆಡ್ಡಿ ಹಳ್ಳಿ ಸಮೀಪದ ಡಾಬಾಕ್ಕೆ ಬಂದಿದ್ದಾರೆ.
ಡಾಬಾದಲ್ಲ ಪಾರ್ಟಿ ಮಾಡುತ್ತಿದ್ದ ವೇಳೆ ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆ ವೇಳೆ ಕೋಪಗೊಂಡ ಸ್ನೇಹಿತರ ಪೈಕಿ ಒಬ್ಬಾತ ಕುಡಿದ ಅಮಲಿನಲ್ಲಿ ಬಿಯರ್ ಬಾಟಲಿಯಿಂದ ನವೀನ್ ರೆಡ್ಡಿಗೆ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
1 ಕೋಟಿ ಮೌಲ್ಯದ ಡ್ರಗ್ಸ್ ವಶ, 16 ನೈಜೀರಿಯನ್ನರನ್ನು ಬಂಧನ
ಸುದ್ದಿ ತಿಳಿದು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಡಾಬಾದವರಿಂದಲೂ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Chikkaballapur, New Year party, man, killed, friend,