Monday, December 2, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಿಕ್ಕಮಗಳೂರು : ಮೊಮ್ಮಗನಿಂದಲೇ ವೃದ್ಧ ದಂಪತಿಯ ಕೊಲೆ

ಚಿಕ್ಕಮಗಳೂರು : ಮೊಮ್ಮಗನಿಂದಲೇ ವೃದ್ಧ ದಂಪತಿಯ ಕೊಲೆ

Chikkamagaluru: Elderly couple murdered by Grandson

ಚಿಕ್ಕಮಗಳೂರು,ನ.22- ಹಣಕಾಸಿನ ವಿಚಾರಕ್ಕೆ ವೃದ್ಧ ದಂಪತಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಗುಬ್ಬಿಯವರಾದ ಬಸಪ್ಪ (65), ಪತ್ನಿ ಲಲಿತಮ (58) ಕೊಲೆಯಾದ ವೃದ್ಧ ದಂಪತಿ. ನಿಶಾಂತ್‌ ಅಜ್ಜಅಜ್ಜಿಯನ್ನು ಕೊಲೆಯಾದ ಮೊಮಗ.

ಘಟನೆ ವಿವರ: ಕೊಳಗಾಮೆ ಗ್ರಾಮದವರಾದ ಈ ದಂಪತಿ ಮಲ್ಲಂದೂರು ಕೊಳಗಾಮೆ ಗ್ರಾಮದ ಮೊಗಣ್ಣಗೌಡ ಎಂಬವರ ಕಾಫಿತೋಟದಲ್ಲಿ ಕಳೆದ 25 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್‌ ಬಸಪ್ಪನ ಮನೆಗೆ ವೃದ್ದನ ಮನೆಗೆ ಬಂದಿದ್ದು, ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲಲಿತಮನ ಜಗಳವಾಗಿ ದೊಣ್ಣೆಯಿಂದ ಹಲ್ಲೆ ಮಾಡಿ ಪರಾರಿಯಗಿದ್ದಾನೆ.

ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ವೃದ್ಧರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಸ್ಥಳಕ್ಕೆ ಮಲ್ಲಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊಮಗ ನಿಶಾಂತ್‌ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲೀಲಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಕೊಳಗಾಮೆ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಂಬಂಧಿಕರು ಇಲ್ಲದ ಕಾರಣಕ್ಕೆ ಗುಬ್ಬಿಯಲ್ಲಿರುವ ಮೃತರ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದೆ. ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ನಿಶಾಂತ್‌ನ ಬಂಧನಕ್ಕೆ ಮಲ್ಲಂದೂರು ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Latest News