ಐಷಾರಾಮಿ ಹೊಟೇಲ್‍ನಲ್ಲಿ ಸ್ಫೋಟ, 22 ಮಂದಿ ಬಲಿ..!

Spread the love

ಹವಾನಾ, ಮೇ 7- ಕ್ಯೂಬಾದ ರಾಜಧಾನಿ ಹವಾನಾದ ಹೃದಯಭಾಗ ಸರಟೋಗಾದ ಐಷಾರಾಮಿ ಹೋಟೆಲ್‍ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟ  ದುರಂತದಲ್ಲಿ ಗರ್ಭಿಣಿ ಮಹಿಳೆ ಮತ್ತು ಮಗು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.

ನವೀಕರಣಗೊಳ್ಳುತ್ತಿದ್ದ ಹವಾನಾದ 96 ಕೊಠಡಿಗಳ ಹೋಟೆಲ್  ಯಾವುದೇ ಪ್ರವಾಸಿಗರು ಇರಲಿಲ್ಲ ಎಂದು ಹವಾನಾ ಗವರ್ನರ್ ರೆನಾಲ್ಡೊ ಗಾರ್ಸಿಯಾ ಜಪಾಟಾ ತಿಳಿಸಿದರು.ಹೋಟೆಲ್‍ನ ಕೆಲ ಗೋಡೆ ಕುಸಿದಿದ್ದು ಅದರಡಿ ಸಿಲುಕಿ ಕೆಲವರು ಸಾವನ್ನಪ್ಪಿದ್ದಾರೆ. ಭಾರಿ ಶಬ್ಧ ಉಂಟಾದ ಕಾರಣ ಜನರು ಆತಂಕಗೊಂಡರು ಕೆಲವೇ ಕ್ಷಣದಲ್ಲಿ ಇದು ಬಾಂಬ್ ಅಥವಾ ಉಗ್ರದಾಳಿಯಲ್ಲ. ಇದು ದುರಂತ ಅಪಘಾತ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ ಮಿಗುಯೆಲ್ ಡಿಯಾಜï-ಕನೆಲ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಹೋಟೆಲ್‍ಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದ್ದ ಟ್ರಕ್‍ನಿಂದ ಸ್ಫೋಟ  ಸಂಭವಿಸಿದೆ ಎಂದು ಕ್ಯೂಬಾದ ಸ್ಟೇಟ್ ಟಿವಿ ವರದಿ ಮಾಡಿದೆ, ಆದರೆ ಅನಿಲವು ಹೇಗೆ ಹೊತ್ತಿಕೊಂಡಿತು ಎಂಬುದರ ಕುರಿತು ವಿವರಗಳನ್ನು ನೀಡಿಲ್ಲ.

ಸ್ಫೋಟ ವು ಹೋಟಲ್‍ನ ಸುತ್ತ ಬಿಂಕಿ ದಟ್ಟ ಹೊಗೆ ಆವರಿಸಿತು ಬೀದಿಯಲ್ಲಿ ಜನರು ವಿಸ್ಮಯದಿಂದ ದಿಟ್ಟಿಸುತ್ತಿದ್ದರು, ಓ ಮೈ ಗಾಡ ಎಂದು ಹೇಳುತ್ತಿದ್ದರು ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಕ್ಯೂಬಾ ಹೆಣಗಾಡುತ್ತಿರುವಾಗ ಇದು ದುರಂತ ಸಂಭವಿಸಿದೆ.ಕೆಲವರಿಗೆ ಭೂಕಂಪನ ಅನುಭವವಾಗಿದೆ.