ಮುರುಘಾ ಶರಣರ ವಿರುದ್ಧ ಪೋಸ್ಕೋ ಪ್ರಕರಣ : ಎಸ್‍ಪಿಗೆ ಮಕ್ಕಳ ಆಯೋಗದಿಂದ ನೋಟಿಸ್

Social Share

ಬೆಂಗಳೂರು, ಸೆ.1- ಚಿತ್ರದುರ್ಗದಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಸ್ಕೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಆಯೋಗ ಜಿಲ್ಲಾ ಪೊಲೀಸ್ ಮುಖ್ಯಾಕಾರಿಗೆ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಪ್ರಕರಣದ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಆಯೋಗ ನೋಟಿಸ್‍ನಲ್ಲಿ ಪ್ರಮುಖ ಒಂಬತ್ತು ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ. ಕಳೆದ ಐದು ದಿನಗಳ ಹಿಂದೆ ಪ್ರಕರಣ ಬೆಳಕಿಗೆ ಬಂದಿತ್ತು. ಸಂತ್ರಸ್ಥ ಬಾಲಕಿಯರು ಮೈಸೂರಿನ ಒಡೆನಾಡಿ ಸಂಸ್ಥೆಯ ಮೊರೆ ಹೋಗಿದ್ದು, ಅಲ್ಲಿಯೇ ಪೋಸ್ಕೋ ಕಾಯ್ದೆ ಮತ್ತು ಅತ್ಯಾಚಾರ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು.

ಮಾರನೇ ದಿನ ಎಫ್‍ಐಆರ್ ಅನ್ನು ಮೈಸೂರಿನಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಆರಂಭಿಸಿರುವ ಪೊಲೀಸರು ಸಂತ್ರಸ್ಥ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಿಆರ್‍ಪಿಸಿ ಸೆಕ್ಷನ್ 164 ಅಡಿ ನ್ಯಾಯಾೀಶರ ಮುಂದೆ ಹೇಳಿಕೆ ದಾಖಲಿಸಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಂತರ ರಾಷ್ಟ್ರೀಯ ಮಕ್ಕಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ಕುರಿತು ನೋಟಿಸ್ ಜಾರಿ ಮಾಡಿದೆ. ನೋಟಿಸ್‍ನಲ್ಲಿ ಪ್ರಕರಣದಲ್ಲಿ ಪೊಲೀಸರು ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಕೇಳಿರುವುದಾಗಿ ತಿಳಿದು ಬಂದಿದೆ.

ಸೆಕ್ಷನ್ 164 ಅಡಿ ದಾಖಲಿಸಲಾದ ಹೇಳಿಕೆಯಲ್ಲಿನ ಅಂಶಗಳು, ವೈದ್ಯಕೀಯ ಪರೀಕ್ಷೆ, ಎಫ್‍ಐಆರ್, ಪೆÇಲೀಸ್ ತನಿಖೆಯ ಮಾಹಿತಿ ಸೇರಿದಂತೆ ಬಹಳಷ್ಟು ವಿವರಗಳನ್ನು ಕೇಳಿ ಚಿತ್ರದುರ್ಗದ ಜಿಲ್ಲಾ ಪೊಲೀಸ್ ಮುಖ್ಯಾಕಾರಿ ಪರಶುರಾಮ್ ಅವರಿಗೆ ಸೂಚನೆ ನೀಡಲಾಗಿದೆ.ರಾಷ್ಟ್ರೀಯ ಮಕ್ಕಳ ಆಯೋಗ ಮಧ್ಯ ಪ್ರವೇಶದಿಂದ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.

Articles You Might Like

Share This Article