ಹದಿಹರೆಯದವರನ್ನೇ ಟಾರ್ಗೆಟ್ ಮಾಡುತ್ತಿದೆ ಕಿಲ್ಲರ್ ಕೊರೊನಾ..!

Social Share

ಬೆಂಗಳೂರು,ಜ.7- ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್-19 ಸೋಂಕು ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ನವೆಂಬರ್ 1ರಿಂದ ಜನವರಿ 2ರವರೆಗೆ ಕೋವಿಡ್ ವಾರ್‍ರೂಮ್‍ನಲ್ಲಿ ದಾಖಲಾಗಿರುವ ಅಂಕಿ ಅಂಶಗಳು ಆತಂಕ ಮೂಡಿಸಿವೆ. ವಿಶ್ಲೇಷಣೆಯಲ್ಲಿ 1ರಿಂದ 9 ಮತ್ತು 10ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕಿನಲ್ಲಿ ಏರುಪೇರು ಕಂಡಿದೆ.
ಡಿ.9ರಿಂದ ಡಿ.19ರವರೆಗೆ ಶೇ.31.23ರಷ್ಟು ಹೆಚ್ಚಳವಾಗಿದ್ದು, ಡಿ.13ರಿಂದ ಡಿ.26ರವರೆಗೆ ಶೇಕಡಾ 40.03ರಷ್ಟಾಗಿದೆ. ಅದು ಡಿ.20ರಿಂದ ಜ.2ರವರೆಗೆ ಮತ್ತಷ್ಟು ಶೇ.69.92ಕ್ಕೆ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ.
ಈ ರೀತಿ ಸತತ ಏರಿಕೆ ವಯಸ್ಕರಲ್ಲಿ ಕೂಡ ಕಂಡುಬಂದಿದೆ. ಓಮಿಕ್ರಾನ್ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿದೆ. ಹಿಂದಿನ ಎರಡು ಅಲೆಗಳಲ್ಲಿ ಪಾರಾದ ಮಕ್ಕಳು ಈ ಬಾರಿ ಸೋಂಕಿಗೆ ಒಳಗಾಗಬಹುದು. ಸರ್ಕಾರಿ ಶಾಲಾ ಸಮೂಹಗಳು ಬಹಳ ಕಡಿಮೆಯಾಗಿದ್ದು, ಸುರಕ್ಷಿತ ವಲಯವಾಗಿದೆ ಎಂದು ತಾಂತ್ರಿಕ ಸಮಿತಿ ಸಲಹಾ ಸದಸ್ಯರೊಬ್ಬರು ಹೇಳಿದ್ದಾರೆ.
ಹೊರವಲಯದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶಾಲವಾದ ತೆರೆದ ಸ್ಥಳಗಳಲ್ಲಿ ಶಾಲೆಗಳು ನಡೆಯುವುದರಿಂದ ದಟ್ಟಣೆ ಕಡಿಮೆ. ವಯಸ್ಕರು ಕೆಲಸಕ್ಕಾಗಿ ಹೊರಗೆ ಹೋಗುವುದರಿಂದ ಮಕ್ಕಳು ಹೊರಗೆ ಆಟವಾಡಲು ಹೋದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಎಂದು ಅವರು ತಿಳಿಸಿದ್ದಾರೆ.
 

Articles You Might Like

Share This Article