ವೋಟರ್ ಐಡಿ ಹಗರಣ : ಚಿಲುಮೆ ರವಿಗೆ ಡ್ರಿಲ್

Social Share

ಬೆಂಗಳೂರು,ನ.21- ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಎಂಬಾತನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯುತ್ತಿದ್ದಾರೆ.

ಚಿಲುಮೆ ಸಂಸ್ಥೆಯನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಸ್ಥಾಪಿಸಿದ್ದೀರಿ ಇದರ ಕಾರ್ಯ ವೈಖರಿ ಏನು ಎಷ್ಟು ಮಂದಿ ನಿರ್ದೇಶಕರು ಹಾಗು ಸಿಬ್ಬಂ ಇದ್ದಾರೆ ಅವರುಗಳ ಕೆಲಸವೇನು. ಈ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಡಿಸಿದವರು ಯಾರು ಯಾವ ಯಾವ ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ ಯಾವ ಯ್ಯಾಪ್ ತಯಾರಿಸಿ ಅದರಲ್ಲಿ ಯಾವ ಯಾವ ಮಾಹಿತಿಗಳನ್ನು ಇಟ್ಟುಕೊಂಡಿದ್ದೀರಿ ನೀವು ಸಂಗ್ರಹಿಸಿದ ಮತದಾರರ ಗೌಪ್ಯಮಾಹಿತಿಗಳನ್ನು ಯಾವ ಯಾವ ರಾಜಕಾರಣಿಗಳಿಗೆ ಕೊಟ್ಟಿದ್ದೀರ ಇದಕ್ಕಾಗಿ ಅವರಿಂದ ಹಣ ಪಡೆದಿದ್ದೀರ.

ನಿಮಗೆ ಯಾವ ಯಾವ ಶಾಸಕರು, ಸಚಿವರು ಮತ್ತು ರಾಜಕಾರಣಿಗಳ ಪರಿಚಯ ಇದೆಯೇ ಇದ್ದರೆ ಎಷ್ಟು ವರ್ಷಗಳಿಂದ ಅವರುಗಳ ಜೊತೆ ಸಂಪರ್ಕದಲ್ಲಿದ್ದು, ಯಾವ ಯಾವ ರೀತಿ ಸಹಾಯ ಮಾಡಿದ್ದೀರಿ. ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಎಲ್ಲಿ ಗೆ ಹೋಗಿ ತಲೆ ಮರೆಸಿಕೊಂಡಿದ್ದೀರಿ ಯಾವ ಯಾವ ಜಿಲ್ಲೆಗೆ ತೆರಳಿದ್ದೀರಿ, ಹೀಗೆ ಹತ್ತಾರು ಪ್ರಶ್ನೆಗಳನ್ನು ರವಿಕುಮಾರ್ ಅವರಿಗೆ ಕೇಳಿ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ರವಿಕುಮಾರ್ ಪರಾರಿಯಾಗಿದ್ದರು. ಇವರ ಬಂಧನಕ್ಕಾಗಿ ವಿಶೇಷ ತಂಡಗಳು ದಾಬಸ್‍ಪೇಟೆ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶೋಧ ನಡೆಸಿದವು. ಆದರೆ ಅವರು ಸಿಕ್ಕಿರಲಿಲ್ಲ.

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ಕಳೆದ ರಾತ್ರಿ ವಕೀಲರೊಬ್ಬರನ್ನು ನೋಡಲು ರವಿಕುಮಾರ್ ಲಾಲ್ ಬಾಗ್ ಬಳಿ ಬಂದಾಗ ಮಾಹಿತಿ ಪಡೆದು ಹಲಸೂರು ಗೇಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಬಂದಿಸಿದ್ದಾರೆ.
ಈ ಪ್ರಕರಣದಲ್ಲಿ ಈ ತನಕ ರವಿಕುಮಾರ್ ಹಾಗೂ ಅವರ ಸಹೋದರ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Chilume, NGO, director, Ravikumar, arrested, Bengaluru, voter, data, theft, case,

Articles You Might Like

Share This Article