ಬೆಂಗಳೂರು,ಡಿ.9- ಚಿಲುಮೆ ಸಂಸ್ಥೆ ಎಂಬುದು ಎನ್ ಜಿ ಓ ಅಲ್ಲವೇ ಅಲ್ಲ ಎಂಬ ರೋಚಕ ಸಂಗತಿ ಹೊರಬಿದ್ದಿದೆ.
ಲಾಭದ ಉದ್ದೇಶವಿಲ್ಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಎಂದು ವೇಷ ಹಾಕಿದ ಅನೇಕ ಅಕ್ರಮ ನಡೆಸಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಚಿಲುಮೆ ಎಜುಕೇಶನಲ್ ಆಂಡ್ ಕಲ್ಚರಲ, ರೂರಲ್ ಡೆವಲಪ್ಮೆಂಟ್ ಎಂಬ ಹೆಸರೇ ಬೋಗಸ್ ಆಗಿದ್ದು ನೊಂದಣಿಯನ್ನೂ ಪರಿಶೀಲನೆ ಮಾಡದೇ ಕೆಲಸ ಕೊಟ್ಟಿರುವ ಬಿಬಿಎಂಪಿ ನಡೆ ಅನುಮಾನಕ್ಕೆ ಎಡೆಮಾಡಿದೆ.
ಕಾಪೆರ್ರೇಟ್ ನಿಯಮಗಳ ಪ್ರಕಾರ ನೊಂದಣಿಯಾಗಿದ್ದು ಚಿಲುಮೆ ಪ್ರೈವೇಟ್ ಲಿಮಿಟೆಡ್ ಕಂಪನಿ
ಯಾಗಿದೆ.
ಚುನಾವಣಾ ಜಾಗೃತಿಗೆ ಖಾಸಗಿ ಕಂಪನಿಗಳ ಸಹಯೋಗ ಪಡೆಯಲು ಅವಕಾಶವಿಲ್ಲ,ಚಿಲುಮೆ ಎಜುಕೇಷನಲ್ ಅಂಡ್ ಕಲ್ಚರಲ, ರೂರಲ್ ಡೆವಲಪ್ಮೆಂಟ್ ಹೆಸರಲ್ಲಿ ಕೆಲಸ ಪಡೆಯುತ್ತಿದ್ದವರು ನಂತರ ಚಿಲುಮೆ ಎಂಟರ್ ಪ್ರೈಸಸ್‍ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ಹಣ ಪಡೆದಿರುವುದು ಬಯಲಿಗೆ ಬಂದಿದೆ.
ನಟ ಅನಿರುದ್ಧ್ ನಿರ್ಬಂಧ ತೆರವಿಗೆ ಎಸ್.ನಾರಾಯಣ್ ಸಂಧಾನ
ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯಾ ಬಿಸ್ವಾಸ್ ನಡೆಸಿದ ತನಿಖೆಯಲ್ಲಿ ಬಯಲುಚಿಲುಮೆ ಟ್ರಸ್ಟ್ ಅಲ್ಲ ಎಂಬುದು ಗೊತ್ತಾಗಿದೆ ಆದರೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಬ್ರೇಕ್, ಕಟೀಲ್ ಮುಂದುವರಿಕೆ
ಚಿಲುಮೆಯ ಅಕ್ರಮ ತಿಳಿದಿದ್ರು ಪದೇ ಪದೇ ಚಿಲುಮೆಗೆ ಸರ್ವೆ ಇತ್ಯಾದಿ ಕೆಲಸಗಳನ್ನು ನೀಡಿರುವ ಬಿಬಿಎಂಪಿ ಅಧಿಕಾರಿಗಳು ನೀಡಿದ್ದಾರೆ ಇದರ ಹಿಂದೆ ಕೆಲ ಅಧಿಕಾರಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇದರ ನಡುವೆ ಬಿಬಿಎಂಪಿ ಅಧಿಕಾರಿಗಳ ವಿರುದ್ದ ತನಿಖೆಗೆಗೆ ಚುನಾವಣಾ ಆಯೋಗ ಮುಂದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
Chilume, NGO, registered, Private Limited, Company,