ಚೀನಾಗೆ ಔಷದೋಪಾಚಾರ ಪೂರೈಸಲು ಭಾರತ ಸಿದ್ಧ

Social Share

ನವದೆಹಲಿ,ಡಿ..23- ಚೀನಾದಲ್ಲಿ ಕೋವಿಡ್ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಜ್ವರಕ್ಕೆ ಬಳಸಲಾಗುವ ಔಷಧಿಗಳ ಕೊರತೆ ಎದುರಾಗಿದ್ದು, ಅಗತ್ಯ ಸಂದರ್ಭದಲ್ಲಿ ಚೀನಾಗೆ ಔಷಧಿ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಸಿಡಿಎಸ್‍ಸಿಒ ತಿಳಿಸಿದೆ.

ಚೀನಾದಲ್ಲಿ ಸುದೀರ್ಘ ಕ್ವಾರಂಟೈನ್, ವ್ಯಾಪಕ ಪರೀಕ್ಷೆ ಮತ್ತು ಬಲವಂತದ ಲಾಕ್‍ಡೌನ್ ತೆರವು ಮಾಡಿದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಮೂಲಗಳ ಪ್ರಕಾರ ಚೀನಾದಲ್ಲಿ 10 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಕಳೆದೆರಡು ದಿನಗಳಿಂದ ಸಾವಿನ ಪ್ರಕರಣ ವರದಿಯಾಗದೇ ಇದ್ದರೂ, ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಹೆಚ್ಚಾಗಿದೆ. ಅಂತ್ಯಕ್ರಿಯೆಗಾಗಿ ಸಾಲು ಗಟ್ಟಿ ನಿಂತಿರುವವರ ಸಂಖ್ಯೆ ವಿಪರಿತವಾಗಿದೆ.

ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಚಿಕಿತ್ಸೆ ದುಸ್ತರವಾಗಿದೆ. ಔಷಧಿಗಳ ಕೊರತೆ ಎದುರಾಗಿದೆ. ಲಭ್ಯ ಇರುವ ಔಷಧಿಗಳನ್ನು ಮಿತವಾಗಿ ಬಳಕೆ ಮಾಡುತ್ತಿರುವ ಚೀನಾ, ಜ್ವರಕ್ಕೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳ ಖರೀದಿಗೆ ಕಡಿವಾಣ ಹಾಕಿದೆ.

ತುಂಡಾಗಿದ್ದ ಕೈಯನ್ನು ಮರು ಜೋಡಿಸಿದ AIIMS ವೈದ್ಯರು

ಚೀನಾದ ಪರಿಸ್ಥಿತಿಯ ಮೇಲೆ ನಿಗಾ ವಹಿಸಿರುವ ಭಾರತ ಸರ್ಕಾರ ಅಗತ್ಯ ನೆರವು ನೀಡಲು ಮುಂದಾಗಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ಅಧ್ಯಕ್ಷರು ಚೀನಾದಿಂದ ಬೇಡಿಕೆ ಬಂದರೆ ಔಷಗಳನ್ನು ಪೂರೈಸಲು ಸಿದ್ದವಿದೆ ಎಂದಿದ್ದಾರೆ.

ಭಾರತ ಇಂದು ವಿಶ್ವದಲ್ಲೇ ಅತಿದೊಡ್ಡ ಔಷಧ ಮಾರುಕಟ್ಟೆಯಾಗಿದೆ. ವಿಶ್ವದ ಯಾವ ದೇಶದಲ್ಲೂ ಇಲ್ಲದಷ್ಟು ಜನರಿಕ್ ಮಳಿಗೆಗಳು ಭಾರತದಲ್ಲಿವೆ. ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಹೊಂದಿದೆ. ಅಮೆರಿಕಾದೊಂದಿಗೆ ಔಷಧ ವ್ಯಾಪಾರ ಸಂಬಂಧವನ್ನು ಭಾರತ ನಿರ್ವಹಣೆ ಮಾಡುತ್ತಿದೆ. ಸಂಕಷ್ಟ ಸಮಯದಲ್ಲಿ ಚೀನಾಗೂ ಸಹಾಯ ಮಾಡಲು ತಯಾರಿದೆ ಎಂದು ಹೇಳಿದ್ದಾರೆ.

ಜ್ವರಕ್ಕೆ ಬಳಕೆಯಾಗುವ ಪ್ಯಾರಾಸಿಥಾಮಲ್ ಮತ್ತು ಐಬ್ರೂಫಿನ್ ಮಾತ್ರೆಗಳು ಹಾಗೂ ಸರ್ಜಿಕಲ್ ಸಲಕರಣಗಳನ್ನು ರಫ್ತು ಮಾಡಲು ತಯಾರಿದ್ದೇವೆ ಎಂದು ಔಷಧಗಳ ರಫ್ತು ಪರಿಷತ್ ಅಧ್ಯಕ್ಷರಾದ ಶಹಿಲ್ ಮುಂಜಾಲ್ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರವಿಂದಂ ಬಾಚಿ ಅವರು, ಚೀನಾದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ವಿಶ್ವದ ಹಲವು ರಾಷ್ಟ್ರಗಳಿಗೆ ಔಷ ಸರಬರಾಜು ವಿಷಯದಲ್ಲಿ ಭಾರತ ಸಹಾಯ ಮಾಡಿದೆ. ಚೀನಾದಿಂದ ಬೇಡಿಕೆ ಬಂದರೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

ಚೀನಾ ಕಳೆದ ಒಂದು ವಾರದಿಂದ ತನ್ನಲ್ಲಿನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ನೀಡಿಲ್ಲ. ವಿಶ್ವಸಂಸ್ಥೆಗೆ ಡಿಸೆಂಬರ್ 7ರಂದು ಕೊನೆಯದಾಗಿ ವಾರದ ವರದಿ ಕಳುಹಿಸಿತ್ತು. ದೈನಂದಿನ ವರದಿ ಕಳುಹಿಸಲು ಚೀನಾ ನಿರಾಕರಿಸಿದೆ ಎಂದು ಹೇಳಲಾಗಿದೆ.

ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ಫೀಲ್ಡಿಗಿಳಿದ ಬಿಬಿಎಂಪಿ ಮಾರ್ಷಲ್‍ಗಳು

ಶಾಂಗೈನ ಆಸ್ಪತ್ರೆಗಳು ತುಂಬಿ ಹೋಗಿವೆ. ಸುಮಾರು ಒಂದು ಮಿಲಿಯನ್ ಜನ ಸೋಂಕು ಪೀಡಿತರಾಗಿದ್ದಾರೆ. ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಚೀನಾದ ಕರಾವಳಿ ಭಾಗದ ಶಾಂಕ್ಸಿಯ ಟೋಂಗ್‍ಚುನ್‍ನಲ್ಲಿ ಪರಿಸ್ಥಿತಿ ಭೀಕರವಾಗಿದೆ ಎನ್ನಲಾಗಿದೆ.

ಚೀನಾ ಈವರೆಗೂ ಒಂಬತ್ತು ಮಾದರಿಯ ಕೋವಿಡ್ ಲಸಿಕೆಗಳನ್ನು ಹೊಂದಿದೆ. ಆದರೆ ಅವು ಬಿಎಫ್.7 ಉಪತಳಿಯನ್ನು ನಿಯಂತ್ರಿಸುವ ಸಾಮಥ್ರ್ಯ ಹೊಂದಿಲ್ಲ ಎಂದು ಹೇಳಲಾಗಿದೆ.

ಸೋಂಕು ಹೆಚ್ಚಾಗಲು ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸಿದ್ದು ಕಾರಣವಲ್ಲ, ಬದಲಾಗಿ ವೇಗವಾಗಿ ಹರಡುವ ರೂಪಾಂತರಿ ಓಮಿಕ್ರಾನ್ ಮತ್ತು ಅದರ ಉಪತಳಿಯ ನಿಗ್ರಹಕ್ಕೆ ಸೂಕ್ತ ಲಸಿಕೆಯನ್ನು ಅಭಿವೃದ್ಧಿ ಪಡಿಸದಿರುವುದು ಕಾರಣ ಎಂದು ಹೇಳಲಾಗಿದೆ.

China, Covid, situation, India, ready, export, medicines,

Articles You Might Like

Share This Article